ಬಂಟ್ವಾಳ :ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಪಾಣೆ ಮಂಗಳೂರು ಬ್ಲಾಕ್ ಇದರ ವತಿಯಿಂದ ಸೇವಾಶ್ರಮ ಗುಂಡೂರಿ ಸಿದ್ದಕಟ್ಟೆ ಇಲ್ಲಿನ ನಿವಾಸಿಗಳಿಗೆ ಮಾಜಿ ಸಚಿವರಾದ ಬಿ ರಮಾನಾಥ ರೈ ಯವರ 71ನೇ ಹುಟ್ಟುಹಬ್ಬದ ಪ್ರಯುಕ್ತ ಮಧ್ಯಾಹ್ನದ ಊಟದ ವ್ಯವಸ್ಥೆ ಹಾಗೂ ದಿನಸಿ ಸಾಮಗ್ರಿಗಳ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರಾದ ಅಬ್ಬಾಸ್ ಆಲಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಬ್ಲಾಕ್ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ನ ಅಧ್ಯಕ್ಷರಾದ ರೋಷನ್ ರೈ, ಸಾಮಾಜಿಕ ಜಾಲತಾಣದ ಮುಖ್ಯಸ್ಥರುಗಳಾದ ಅರುಣ್ ಕುಮಾರ್
ಶೆಟ್ಟಿ, ನಿರಂಜನ್ ರೈ ಹರ್ಷದ್ ಕುಕ್ಕಿಲ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಮಲ್ಲಿಕಾ ಪಕ್ಕಳ, ಪುರಸಭಾ ಸದಸ್ಯರಾದ ಅಬೂಬಕರ್ ಸಿದ್ದೀಕ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮಧುಸೂಧನ್ ಶೆಣೈ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಬ್ರಾಹಿಂ ನವಾಜ್. ಪಂಚಾಯತ್ ಸದಸ್ಯ ರವಿರಾಜ್ ಜೈನ್, ಶರೀಫ್ ಬುಯ,ಮನೋಜ್ ಕನಪ್ಪಾಡಿ, ಪ್ರಶಾಂತ್ ಪಕ್ಕಳ,ವಿಜಯ ಅಲ್ಲಿಪಾದೆ,ಸಂಜಿತ್ ಪೂಜಾರಿ,ತಾರಾನಾಥ್ ಪೇರಿಯೋಡಿ ಹಾಗೂ ಇತರರು ಭಾಗವಹಿಸಿದರು.














