ಬಂಟ್ವಾಳ :ರೋಟರಿ ಕ್ಲಬ್ ಲೋರೆಟ್ಟೊ ಹಿಲ್ಸ್ ಅಶ್ರಯದಲ್ಲಿ ಕೃಷ್ಣಪ್ರಕಾಶಾಭಿನಂದನ ಸನ್ಮಾನ ಕಾರ್ಯಕ್ರಮ ಹಾಗೂ ಎಂಟು ಕ್ಲಬ್ ಗಳ ಜಂಟಿ ಸಭೆಯು ಮಾ.12ನೇ ಬುಧವಾರ ಸಂಜೆ ಲೋರೆಟ್ಟೊ ಪದವಿನ ರೋಟರಿ ಸಭಾವವನದಲ್ಲಿ ಜರಗಿತ್ತು.
ಅಂತರಾಷ್ಟ್ರೀಯ ರೋಟರಿಯಲ್ಲಿ ಅತ್ಯಂತ ಗೌರವಾನ್ವಿತ ಹುದ್ದೆಯನ್ನು ಅಲಂಕರಿಸಿದ ರೋಟರಿ ಜಿಲ್ಲೆ 3181ನ ಮಾಜಿ ಪಿಡಿಜಿ ರೋ , ಪ್ರಕಾಶ್ ಕಾರಂತ್ ರವರು ಪ್ರಸ್ತುತ ಅಸಿಸ್ಟೆಂಟ್ ರೋಟರಿ ಪಬ್ಲಿಕ್ ಇಮೇಜ್ ಕೋ ಆರ್ಡಿನೇಟರ್ (ARPIC) ಹುದ್ದೆಯನ್ನು ಅಲಂಕರಿಸಿರುವುದರಿಂದ ಅವರನ್ನು ಸನ್ಮಾನಿಸಲಾಯಿತು.ಸನ್ಮಾನಿತರು ಮಾತನಾಡಿ ರೋಟರಿ ಬಗ್ಗೆ ಸಾರ್ವಜನಿಕರ ಸದಾ ಅಭಿಪ್ರಾಯವೂ ರೋಟರಿ ಸಾರ್ವಜನಿಕ ಸೇವೆಯಲ್ಲಿ ಅಡಗಿದೆ ಎಂದು ಹೇಳಿದರು.
ರೋಟರಿ ಜಿಲ್ಲೆ 3181ನ ಮಾಜಿ ಪಿಡಿಜಿ ರೋ ಕೃಷ್ಣಶೆಟ್ಟಿಯವರು ಪ್ರಸ್ತುತ ಅಸಿಸ್ಟೆಂಟ್ ರೋಟರಿ ಫೌಂಡೇಶನ್ ಕೋ ಆರ್ಡಿನೇಟರ್ (ARFC)ಹುದ್ದೆಯನ್ನು ಅಲಂಕರಿಸಿರುವುದರಿಂದ ಅವರನ್ನು ಸನ್ಮಾನಿಸಲಾಯಿತು.ಸನ್ಮಾನಿತರು ಮಾತನಾಡಿ ರೋಟರಿ ಫೌಂಡೇಶನ್ ಗೆ ನೀಡುವ ದಾನದಿಂದ ದೊಡ್ಡ ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು,
ರೋಟರಿ ಜಿಲ್ಲೆ 3182 ನ ಮಾಜಿ ಪಿಡಿಜಿ ರೋ ಅಭಿನಂದನೆ ಶೆಟ್ಟಿಯವರು ಪ್ರಸ್ತುತ ರೋಟರಿ ಕೋ ಆರ್ಡಿನೇಟರ್ ಫಾರ್ ಪಬ್ಲಿಕ್ ಇಮೇಜ್ ,(RCPI)ಹುದ್ದೆಯನ್ನು ಅಲಂಕರಿಸಿರುವುದರಿಂದ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರು ಮಾತನಾಡಿ ಪಿಡಿಜಿ ರೋ ಕೃಷ್ಣಶೆಟ್ಟಿ ಹಾಗೂ ರೋ ಪಿಡಿಜಿ ಪ್ರಕಾಶ್ ಕಾರಂತ್ ರವರು ಈ ಹಿಂದೆ ಅವರಿಗೆ ಸಂಬಂದಿಸಿದ ಹುದ್ದೆಗಳಲ್ಲಿ ಮಾಡಿದ ಸತ್ಕಾರ್ಯದಿಂದ ಅವರಿಗೆ ಈ ಹುದ್ದೆಗಳು ಒಲಿದು ಬಂದಿದೆ ಎಂದು ಹೇಳಿದರು, ರೋಟರಿ ಸದಸ್ಯರು ಸಮಾಜದಲ್ಲಿ ಮಾಡುವಂತಹ ಉತ್ತಮ ಕೆಲಸಗಳು ರೋಟರಿ ಸಂಸ್ಥೆಗೆ ಗೌರವವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು,
ಹಾಗೂ ಈ ಕಾರ್ಯಕ್ರಮಕ್ಕೆ ಬಂಟ್ವಾಳದ ಅಧ್ಯಕ್ಷರಾದ ರೋ ಬೇಬಿ ಕುಂದರ್,
ರೋಟರಿ ಕ್ಲಬ್ ಮೋಡಂಕಪು ಮಾಜಿ ಅಧ್ಯಕ್ಷರಾದ ರೋ ಎಲಿಯಾಸ್ ಸಾಂಕ್ಟಿಸ್ಟ್, ರೋಟರಿ ಕ್ಲಬ್ ಬಿ. ಸಿ. ರೋಡ್ ಸಿಟಿಯ ಸ್ಥಾಪಕಾಧ್ಯಕ್ಷರು ರೋ ಸತೀಶ್ ಕುಮಾರ್, ರೋಟರಿ ಕ್ಲಬ್ ಮೋಡಂತ್ಯಾರ್ ನ ಸ್ಥಾಪಕಾಧ್ಯಕ್ಷರು ರೋ ಮೋನಪ್ಪ ಪೂಜಾರಿ ಕಂಡೆತ್ಯರ್,ರೋಟರಿ ಕ್ಲಬ್ ಸಿದ್ದಕಟ್ಟೆ ಯ ಅಧ್ಯಕ್ಷರಾದ ರೋ ಶಿವಯ್ಯ ಎಸ್ ಎಲ್ , ರೋಟರಿ ಕ್ಲಬ್ ಬಂಟ್ವಾಳ ಟೌನ್ ನ ಅಧ್ಯಕ್ಷರಾದ ರೋ ಕಿಶೋರ್ ಕುಮಾರ್, ರೋಟರಿ ಕ್ಲಬ್ ಫರಂಗಿಪೇಟೆ ಯ ಅಧ್ಯಕ್ಷರಾದ ರೋ ಅರ್ಜುನ್ ಪೂಂಜಾ, ರೋಟರಿ ಕ್ಲಬ್ ಲೋರೆಟೊ ಹಿಲ್ಸ್ ನ ಸ್ಥಾಪಕಾಧ್ಯಕ್ಷರಾದ ರೋ ಅವಿಲ್ ಮ್ಯಾನೇಜಸ್, ಹಾಗೂ ಈ ಎಲ್ಲಾ ಕ್ಲಬಿನ ಕಾರ್ಯದರ್ಶಿ ,ಪದಾಧಿಕಾರಿಗಳು, ಸದಸ್ಯರು, ಜಿಲ್ಲೆಯ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು ಹಾಗೂ ಕುಟುಂಬಸ್ಥರು ಪಾಲ್ಗೊಂಡಿದರು.
ರೋಟರಿ ಕ್ಲಬ್ ಲೋರೆಟೊ ಹಿಲ್ಸ್ ನ ಅಧ್ಯಕ್ಷರಾದ ರೋ ಸುರೇಶ್ ಶೆಟ್ಟಿ ಯವರು ಸ್ವಾಗತಿಸಿದರು, ಕಾರ್ಯದರ್ಶಿ ರಾಜೇಶ್ ಶೆಟ್ಟಿ ಯವರು ವಂದಿಸಿದರು, ರಾಘವೇಂದ್ರ ಭಟ್, ವಿಜಯ ಫೆರ್ನಾಂಡಿಸ್, ರಾಯಿ ರಮೇಶ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು,
ಈ ಕಾರ್ಯಕ್ರಮದ ಪ್ರಯೋಜಕರಾದ ಲೋರೆಟೊ ಹಿಲ್ಸ್ ಕ್ಲಬ್ ನ ಮಾಜಿ ಸಹಾಯಕ ಗವರ್ನರ್ ರೋ ರಾಘವೇಂದ್ರ ಭಟ್, ಪದಾಧಿಕಾರಿಗಳಾದ ರೋ ಹರಿಪ್ರಸಾದ್ ಶೆಟ್ಟಿ ರೋ ಕಿರಣ್ ಮಂಜಿಲ, ರೋ ಅವಿಲ್ ಮ್ಯಾನೇಜಸ್,ರೋ ಶೃತಿ ಮಾಡ್ತಾ, ಹಾಗೂ ಮೋಡಂತ್ಯಾರ್ ಕ್ಲಬ್ ನ ರೋ ಎಲಿಯಾಸ್ ಸಾಂಕ್ಟಿಸ್ಟ್,ರವರನ್ನು ಗೌರವಿಸಲಾಯಿತು














