ಅರ್ಕುಳ :ಫೆ 15ರಂದು ಶ್ರೀ ಉಳ್ಳಾಕ್ಲು ಮಗೃಂತಾಯಿ ಕ್ಷೇತ್ರಕ್ಕೆ ನೂತನ ಅಶ್ವಬಂಡಿ ಸಮರ್ಪಣಾ ಶೋಭಯಾತ್ರೆ.

Coastal Bulletin
ಅರ್ಕುಳ :ಫೆ 15ರಂದು ಶ್ರೀ ಉಳ್ಳಾಕ್ಲು ಮಗೃಂತಾಯಿ ಕ್ಷೇತ್ರಕ್ಕೆ ನೂತನ ಅಶ್ವಬಂಡಿ ಸಮರ್ಪಣಾ ಶೋಭಯಾತ್ರೆ.

ಬಂಟ್ವಾಳ :ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಕ್ಷೇತ್ರಕ್ಕೆ ನೂತನ ಅಶ್ವ ಬಂಡಿಯು ಫೆ.15ರಂದು ಸಂಜೆ 04 ಗಂಟೆಗೆ ಭವ್ಯ ಶೋಭಾಯಾತ್ರೆಯ ಮೂಲಕ ಸಮರ್ಪಣೆಯಾಗಲಿದೆ.

ಕಡೆಗೋಳಿ,ಫರಂಗಿಪೇಟೆ , ಅರ್ಕುಳ ದ್ವಾರದ ಮೂಲಕ ಶ್ರೀ ಕ್ಷೇತ್ರ ಅರ್ಕುಳಕ್ಕೆ ನೂತನ ಅಶ್ವ ಬಂಡಿ ಸಮರ್ಪಣಾ ಶೋಭಾಯಾತ್ರೆಯು ಸಾಗಿ ಬರಲಿದೆ.

ಈ ಅಶ್ವ ಬಂಡಿ ಸಮರ್ಪಣಾ ಶೋಭಾಯಾತ್ರೆಯಲ್ಲಿ ಎಲ್ಲಾ ಭಗವದ್ಭಕ್ತರು, ಸಂಘ ಸಂಸ್ಥೆಗಳು ಪಾಲ್ಗೊಳ್ಳಬೇಕೆಂದು ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment