ಬಂಟ್ವಾಳ :ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್ ಇದರ 43ನೇ ವಾರ್ಷಿಕೋತ್ಸವದ ಸಂಭ್ರಮದ ಸಮಾರಂಭ ಫೆ.7ರಂದು ಶನಿವಾರ ಕ್ಲಬ್ ವಠಾರದಲ್ಲಿ ಗಣ ಹೋಮ, ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾರ್ವಜನಿಕ ಶನೇಶ್ವರ ಪೂಜೆ ಮತ್ತು ಅನ್ನ ಸಂತರ್ಪಣೆಯೊಂದಿಗೆ ಜರುಗಿತು.
ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಉದ್ಘಾಟಿಸಿ ಸಂಘದ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಮಾಜದ ಅಭಿವೃದ್ಧಿಯಲ್ಲಿ ಸಂಘ-ಸಂಸ್ಥೆಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.
ಉಳಾಯಿಬೆಟ್ಟು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಹರಿಕೇಶ್ ಶೆಟ್ಟಿ ಭಾಗವಹಿಸಿ ಸಂಘವು ವಿವಿಧ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಹಾಗೂ ಸಮಾಜದ ಒಳಿತಿಗಾಗಿ ಸಂಘವು ಅವಿರತವಾಗಿ ಶ್ರಮಿಸುವುದರ ಬಗ್ಗೆ ತಿಳಿಸಿದರು. ಚೇತನ್ ಅಮೀನ್ ಮತ್ತು ಶಿರಾಲಿ ಎಸ್ ಸುವರ್ಣ ಇವರನ್ನು ಸನ್ಮಾನಿಸಲಾಯಿತು . ಎಸ್. ಎಸ್.
ಎಲ್. ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಸಮಾರಂಭದಲ್ಲಿ ಶೈಲೇಂದ್ರ ಸುವರ್ಣ, ಎನ್. ರವಿರಾಜ್ ರಾವ್,ಸುದರ್ಶನ್ ಶೆಟ್ಟಿ ,ದಿನೇಶ್ ಪೆರ್ಮಂಕಿ, ಪ್ರವೀಣ್ ಪೂಜಾರಿ, ಕಿರಣ್ ಪಕ್ಕಳ ಪೆರ್ಮಂಕಿ ಗುತ್ತು , ಪ್ರಶಾಂತ್ ಸಲ್ದಾನ ಉಪಸ್ಥಿತರಿದ್ದರು.
ಸುನಿಲ್ ಕುಮಾರ್ ಸ್ವಾಗತಿಸಿ. ಪವನ್ ಕುಲಾಲ್ ವರದಿ ವಾಚಿಸಿದರು. ಶ್ರೀನಾಥ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಹಾಗೂ ಎಲ್ಲೇ ದಾದ ಎರೆಗ್ ಗೊತ್ತು ನಾಟಕವು ಜನಮನ ಸೆಳೆಯಿತು.















