Coastal Bulletin

ಬಂಟ್ವಾಳ :ಅಮ್ಮುಂಜೆ ಗ್ರಾಮದ ಪೊಳಲಿ ಕ್ಷೇತ್ರದ ಸಾವಿರ ಸೀಮೆಗೆ ಒಳಪಟ್ಟ ಬೆಂಜನಪದವು ಶ್ರೀ ಭದ್ರಾಕಾಳಿ ದೇವಸ್ಥಾನದ ಶ್ರೀ ಭದ್ರಾಕಾಳಿ ಅಮ್ಮನವರ ಹಾಗೂ ಪರಿವಾರ ದೈವ ದೇವರ ಗುಡಿಗಳು ಸುಮಾರು ರೂ 2 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳಲಿದ್ದು ಇದರ ಶಿಲಾನ್ಯಾಸ ಸಮಾರಂಭವು ತಾ 17ರಂದು ಗುರುವಾರ ನಡೆಯಲಿದೆ.

ಅಂದು ಕ್ಷೇತ್ರದ ತಂತ್ರಿವರ್ಯರಾದ ಲೋಕೇಶ್ ಶಾಂತಿಯವರ ನೇತೃತ್ವದಲ್ಲಿ ಬೆಳ್ಳಿಗೆ 8.45ಕ್ಕೆ ಶ್ರೀ ನಾಗದೇವರ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ನಡೆಯಲಿದೆ ಹಾಗೂ 8.50ಕ್ಕೆ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ ಸಮಾರಂಭ ನೆರವೇರಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮವು 9 ಗಂಟೆಯಿಂದ ಪ್ರಾರಂಭವಾಗಲಿದ್ದು,ಪರಮ ಪೂಜ್ಯ ಯೋಗೀ ಕೌಸ್ತುಭ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ

ಧಾಮ ಮಾಣಿಲ ಇವರು ಆಶೀರ್ವಚನ ನೀಡಲಿದ್ದಾರೆ. ಸಂಸದರು ಹಾಗೂ ಬಿ ಜೆ ಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು,ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್,ಮಾಜಿ ಸಚಿವರಾದ ಬಿ ರಮಾನಾಥ ರೈ ಸಹಿತ ಹಲವು ಮಂದಿ ಗಣ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಎಂದು ಪುನರ್ ನಿರ್ಮಾಣ ಸಮಿತಿಯ ಸಂಚಾಲಕ ಬಿ ಜನಾರ್ಧನ ಅಮ್ಮುಂಜೆ ಕೋಸ್ಟಲ್ ಬುಲೆಟಿನ್ ಗೆ ಮಾಹಿತಿ ನೀಡಿದ್ದಾರೆ.





Leave a Comment