ಮೂಡುಬಿದಿರೆ ಮೂಲದ ಸ್ವ ಉದ್ಯಮಿ ಸಾಧಕ ರಾಜೇಶ್ ಶೆಟ್ಟಿ ಅವರಿಗೆ ಅಯೋಧ್ಯೆಯ ಶ್ರೀ ರಾಮ ಮಂದಿರ ಬೆಳಗುವ ಭಾಗ್ಯ!!

ಗಣೇಶ್ ಕಾಮತ್ ಮೂಡಬಿದಿರೆ
ಮೂಡುಬಿದಿರೆ ಮೂಲದ ಸ್ವ ಉದ್ಯಮಿ ಸಾಧಕ ರಾಜೇಶ್ ಶೆಟ್ಟಿ ಅವರಿಗೆ ಅಯೋಧ್ಯೆಯ ಶ್ರೀ ರಾಮ ಮಂದಿರ ಬೆಳಗುವ ಭಾಗ್ಯ!!

ಮೂಡುಬಿದಿರೆ: ಬದುಕು ಕಟ್ಟಿಕೊಳ್ಳುವ ಸವಾಲಿನ ನಡುವೆ ಬೆಂಗಳೂರಿನಲ್ಲಿ ಟೆಕ್ನೀಶಿಯನ್ ಆಗಿ ದುಡಿಯುತ್ತಿದ್ದ ಯುವಕ ಆರ್. ರಾಜೇಶ್ ಶೆಟ್ಟಿ ಇಂದು ದೇಶದ ಉದ್ದಗಲ ವ್ಯಾಪಿಸಿರುವ ಪ್ರತಿಷ್ಠಿತ ಕಂಪೆನಿಗಳ ಇಲೆಕ್ಟ್ರಿಕಲ್ ನಿರ್ವಹಣೆಯ ಕೋಟ್ಯಂತರ ವಹಿವಾಟಿನ ಯಶಸ್ವಿ ಉದ್ಯಮಿ. ಕಳೆದ ಎರಡೂವರೆ ದಶಕಗಳಲ್ಲಿ ಐದು ಸಾವಿರಕ್ಕೂ ಮಿಕ್ಕಿದ ಮಂದಿಗೆ ಉದ್ಯೋಗಾವಕಾಶ ನೀಡಿದ ತನ್ನ ಸ್ವ ಉದ್ಯಮ ಸಂಸ್ಥೆ ರಜತ ಸಂಭ್ರಮದಲ್ಲಿರುವಾಗಲೇ ತನ್ನ ಪರಿಶ್ರಮ, ಸಾಧನೆಗೆ ಗರಿ ಎಂಬಂತೆ ಐತಿಹಾಸಿಕ ಅಯೋಧ್ಯೆಯ ಶ್ರೀ ರಾಮ ಮಂದಿರದ ಸಮಗ್ರ ಇಲೆಕ್ಟ್ರಿಕಲ್ ವ್ಯವಸ್ಥೆ, ನಿರ್ವಹಣೆಯ ಭಾಗ್ಯ ರಾಜೇಶ್ ಶೆಟ್ಟಿ ಅವರ ಬಳಗಕ್ಕೆ ಸಿಕ್ಕಿದ್ದು ಯೋಗಾಯೋಗ ಎಂದರೂ ತಪ್ಪಲ್ಲ.

ಅಂದ ಹಾಗೆ ಇಂತಹದ್ದೊಂದು ಅಪರೂಪದ ಸುವಣರ್ಾವಕಾಶ ಪಡೆದ ಸಾಧಕ ನಮ್ಮ ಕರಾವಳಿ ಕರ್ನಾಟಕದ ದ.ಕ ಜಿಲ್ಲೆಯ ಮೂಡುಬಿದಿರೆಯವರು ಎನ್ನುವುದೇ ವಿಶೇಷ!

ಸಾಫ್ಟ್ವೇರ್ ಇಂಜಿನಿಯರಿಂಗ್ ಆಗಬೇಕೆಂದಿದ್ದ ರಾಜೇಶ್ ಬೆಂಗಳೂರಿನಲ್ಲಿಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಶಿಕ್ಷಣ ಪೂರೈಸಿ ಅಲ್ಲೇ ಟೆಕ್ನೀಶಿಯನ್ ಆಗಿ ಬದುಕು ಕಟ್ಟಿಕೊಳ್ಳಲು ಒದ್ದಾಡಿದ್ದರು. ತಾನಿದ್ದ ಕಂಪೆನಿಯಲ್ಲಿ ಕೆಲಸ ಇನ್ನೇನು ಖಾಯಂ ಆಗುತ್ತದೆ ಎನ್ನುವಷ್ಟರಲ್ಲೇ ಮೇಲಧಿಕಾರಿಯ ಒತ್ತಡಕ್ಕೆ ಕಟ್ಟು ಬಿದ್ದು ತನ್ನದೇ ಸಂಸ್ಥೆ ತೆರೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದು ಅವರ ವೃತ್ತಿ ಬದುಕಿಗೇ ಹೊಸ ತಿರುವು ನೀಡಿತು.

ಅಂದು ಒತ್ತಡಕ್ಕೆ ಸಿಲುಕಿ ಸ್ಥಾಪಿಸಿದ್ದ ಶಂಕರ್ ಹೆಸರಿನ ಸಂಸ್ಥೆ ಇಂದು ಶಂಕರ್ ಇಲೆಕ್ಟ್ರಿಕಲ್ಸ್ ಸವರ್ಿಸ್ ಇಂಡಿಯಾ ಪ್ರೈ.ಲಿ ಎಂಬ ಬೃಹತ್ ಸಂಸ್ಥೆಯಾಗಿ ಬೆಳೆದಿದ್ದು ಅಮೆಜಾನ್, ಗೂಗಲ್, ಯಾಹೂ, ಮೈಕ್ರೋಸಾಫ್ಟ್ ಹೀಗೆ ಬೆಂಗಳೂರು ಮಾತ್ರವಲ್ಲ, ಚೆನ್ನೈ, ಹೈದರಾಬಾದ್, ಮುಂಬೈ ಹೀಗೆ 400ಕ್ಕೂ ಅಧಿಕ ದೊಡ್ಡ ಕಂಪೆನಿಗಳ ಇಲೆಕ್ಟ್ರಿಕಲ್ ನಿರ್ವಹಣೆಯಲ್ಲಿ ಟಾಪರ್ ಆಗಿದೆ. ವಾರ್ಷಿಕ 500 ಕೋಟಿಯಷ್ಟು ವ್ಯವಹಾರವನ್ನೂ ನಡೆಸುತ್ತಿದೆ.

ರಾಮ ಸೇವೆಯ ಅವಕಾಶ..!

ಅಯೋಧ್ಯೆಯ ಶ್ರೀ ರಾಮ ಮಂದಿರ ನಿಮರ್ಾಣದ ಪೂರ್ಣ ಹೊಣೆಗಾರಿಕೆ ಇರುವುದು ಅಲ್ಲಿನ ಶ್ರೀ ರಾಮ ಜನ್ಮ ಭೂಮಿ ಟ್ರಸ್ಟ್ ಹಾಗೂ ಟಾಟಾ ಅವರ ಟಿಸಿಎಸ್ ಸಂಸ್ಥೆಗೆ. ಟಾಟಾ ಅವರ ಉಪ ಸಂಸ್ಥೆ ಟಿಸಿಎಸ್ ಇಂಜಿನಿಯರಿಂಗ್ ಸಂಸ್ಥೆಗೆ ರಾಜೇಶ್ ಶೆಟ್ಟಿ ಅವರ ಸಾಮಥ್ರ್ಯ, ಸಾಧನೆ ಚಿರಪರಿಚಿತ. ಹಾಗಾಗಿಯೇ ಅಯೋಧ್ಯೆಯ ಮಂದಿರದ ಇಲೆಕ್ಟ್ರಿಕಲ್ ವ್ಯವಸ್ಥೆ, ನಿರ್ವಹಣೆಯ ಜವಾಬ್ದಾರಿ ರಾಜೇಶ್ ಅವರಿಗೆ ಕೊಡಬಾರದೇಕೆ ಎನ್ನುವ ಯೋಚನೆ ಹೊಳೆದದ್ದೇ ಇವರ ಹೆಸರನ್ನು ಟಿಸಿಎಸ್ಗೆ ರವಾನಿಸಲಾಗಿತ್ತು ಕೂಡ. ಆದರೆ ಉತ್ತರಭಾರತದವರೇ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡಿದ್ದ ಅಲ್ಲಿನ ವ್ಯವಸ್ಥೆ. ಇವರು ಹೊರಗಿನ ದೂರದವರು ಎನ್ನುವುದೇ ತುಸು ಅಡ್ಡಿಯಾಯಿತು.

ಶ್ರೀ ರಾಮ ಮಂದಿರದ ಕೆಲಸ ಅದು ಮಹತ್ವದ ಜವಾಬ್ದಾರಿ. ಸವಾಲಿನದ್ದು ಕೂಡ. ಸ್ವತಃ ಪ್ರಧಾನಿ ಮೋದಿ, ಯೋಗಿ ಆಗಾಗ ನಿಗಾ ಇರಿಸಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕಾರ್ಯವದು. ಅಲ್ಲಿ ಪ್ರತಿಯೊಂದು ಕೆಲಸವನ್ನೂ ನಾಲ್ಕೈದು ಕಂಪೆನಿಗಳು ವಹಿಸಿಕೊಂಡು ಮಾಡುತ್ತಿದ್ದವು. ರಾಜೇಶ್ ಅವರಿಗೆ ಏನನ್ನಿಸಿತೋ ಕೊಡುವುದಾದರೆ ಇಡೀ ಜವಾಬ್ದಾರಿ ಒಂದೇ ಸಂಸ್ಥೆಗೆ ಕೊಡಿ ಮಾಡಿ ತೋರಿಸುವೆ ಎಂದು ಬಿಟ್ಟರು!

ಕೊನೆಗೂ ಅಯೋಧ್ಯೆ ಶ್ರೀ ರಾಮ ಮಂದಿರದ ಇಲೆಕ್ಟ್ರಿಕಲ್ ವ್ಯವಸ್ಥೆಯ ಜವಾಬ್ದಾರಿ ಕಳೆದ ಜನವರಿಯಲ್ಲಿ ದೊರೆಯಿತು. ಮೊದಲ ಹಂತದಲ್ಲಿ ಗರ್ಭಗುಡಿಯ ಲೈಟಿಂಗ್ ವ್ಯವಸ್ಥೆಗೆ ಆದ್ಯತೆ ನೀಡಲಾಗಿದ್ದು ಡಿಸೆಂಬರ್

2025ರೊಳಗೆ ಸಂಪೂರ್ಣ ವಿದ್ಯುದ್ದೀಕರಣ ಕಾರ್ಯ ಮುಗಿಸಿಕೊಡಬೇಕು. ಆ ನಂತರದ ನಿರ್ವಹಣೆಯ ಜವಾಬ್ದಾರಿಯೂ ರಾಜೇಶ್ ಬಳಗದ ಪಾಲಿಗೆ ದೊರೆತಿದೆ ಎನ್ನುವುದು ಗಮನಾರ್ಹವೇ.

ಇದೀಗ 150 ರಿಂದ 200 ಮಂದಿಯ ತಂಡ ಅಯೋಧ್ಯೆಯ ಮಂದಿರದ ಆವರಣದಲ್ಲಿ ಕಾರ್ಯನಿರತವಾಗಿದ್ದು ಶೇ 70ರಷ್ಟು ಮಂದಿ ಕರಾವಳಿಯವರೇ!. ಗಣೇಶ್ ದೇವಾಡಿಗ, ಸಂಜಯ್ ಪೂಜಾರಿ, ಸಂಪತ್ ಶೆಟ್ಟಿ ಪ್ರಮೋದ್ ಶೆಣೈ ಮೂಡುಬಿದಿರೆ ಹೀಗೆ ತುಳುನಾಡಿನ ದಂಡೇ ಅಯೋಧ್ಯೆಯ ಮಂದಿರದಲ್ಲಿ ಉತ್ಸಾಹದಿಂದ ಕಾರ್ಯನಿರತವಾಗಿದೆ.

ಇದೊಂದು ಬಯಸದೇ ಬಂದ ಭಾಗ್ಯ. ವೃತ್ತಿ ಮಾತ್ರವಲ್ಲ ಜೀವನದ ಅವಿಸ್ಮರಣೀಯ ಕ್ಷಣ ಎನ್ನುವ ರಾಜೇಶ್ ಶೆಟಿ ತುಳುನಾಡಿನ ಕಟೀಲು ಅಮ್ಮನ ಕೃಪೆ, ಮಂತ್ರಾಲಯದ ಗುರುಗಳ ಆಶೀವರ್ಾದ ಎಂದು ಭಾವುಕರಾಗಿ ನುಡಿಯುತ್ತಾರೆ. ವರ್ಷಕ್ಕೊಮ್ಮೆ ಊರ ದೈವಗಳ ಸೇವೆಗೆ, ಕಟೀಲು ಹೀಗೆ ತವರಿನತ್ತ ಮುಖ ಮಾಡುವ ರಾಜೇಶ್ ತಾಯಿ ಲೀಲಾ ಪತ್ನಿ ಅಪಣರ್ಾ, ಪುತ್ರರಾದ ದಕ್ಷ್ರಾಜ್, ಶೌರ್ಯ ಹೀಗೆ ಎಲ್ಲರ ಸಹಕಾರದಿಂದ ತನ್ನ ಸ್ವ ಉದ್ಯಮದಲ್ಲಿ ಸಾಮಾಜಿಕ ಕಾಳಜಿ, ಸೇವಾ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ. ಯೋಗ ಎಂಬಂತೆ ಅಯೋಧ್ಯೆಯ ಶ್ರೀ ರಾಮ ತನ್ನ ಮಂದಿರ ಬೆಳಗುವ ಕಾರ್ಯಕ್ಕೆ ಸಾಧಕ ರಾಜೇಶ್ ಅವರಿಗೆ ಅವಕಾಶ ನೀಡಿರುವುದು ವಿಶೇಷ!

ಎಲ್ಲೆಲ್ಲೂ ರಾಮ...!

ರಾಜೇಶ್ ತನ್ನ ಸವಾಲಿನ ಬದುಕನ್ನು ಪರಿಶ್ರಮದಿಂದಲೇ ಕಟ್ಟಿಕೊಂಡ ಸಾಧಕ. ಇಂದು ತಾನೇನಾಗಿದ್ದೇನೋ ಅದೆಲ್ಲವೂ ದೈವಚಿತ್ತ. ನನ್ನದೇನಿಲ್ಲ ಎನ್ನುವ ವಿನೀತ ಭಾವ ಅವರದ್ದು. ಅಂದ ಹಾಗೆ ಅವರ ಬದುಕಿನಲ್ಲಿ ರಾಮನ ಛಾಯೆ ಅಲಲ್ಲಿ ಎದ್ದು ಕಂಡಿದೆ. ರಾಜೇಶ್ ಅವರ ತಂದೆ ರಾಮ! ವೃತ್ತಿ ಜೀವನದಲ್ಲಿ ಮಂತ್ರಾಲಯದ ರಾಯರ ಸೇವೆ, ಗುರು ಶ್ರೀ ಸುಭುಧೇಂದ್ರ ತೀರ್ಥರ ಅನುಗ್ರಹದಿಂದ ಕ್ಷೇತ್ರದ ಆಕರ್ಷಕ ಬೆಳಕಿನ ಅಲಂಕಾರದ ಪ್ರಾಜೆಕ್ಟ್ನಲ್ಲೂ ಯಶಸ್ಸು! ಹೀಗೆ ಮಂತ್ರಾಲಯದಲ್ಲೂ ಗುರುಗಳ ಮೂಲರಾಮನ ಸೇವೆ. ಇದೀಗ ಅಯೋಧ್ಯೆಯ ಶ್ರೀ ರಾಮನ ಸೇವಾ ಭಾಗ್ಯ.

ಅದರ ಜತೆಗೆ ಜೈನಕಾಶಿ ಮೂಡುಬಿದಿರೆ ಎಂದರೆ ಬಸದಿ,ಕೆರೆ ದೇವಳಗಳು ಹೀಗೆ ಎಲ್ಲದರಲ್ಲೂ 18ಕ್ಕೆ ಪ್ರಸಿದ್ಧ!. ಅಂತಹ ಮೂಡುಬಿದಿರೆಯ ಮಣ್ಣಿನ ಮಗ ರಾಜೇಶ್ ಬದುಕಿಗೆ ತಿರುವು ನೀಡಿದ್ದ ಕಂಪೆನಿ ತೆರೆದದ್ದು 1997ರ ಡಿ 18 ರಂದು! ಮಂತ್ರಾಲಯದ ಲೈಟಿಂಗ್ ಪ್ರಾಜೆಕ್ಟ್ ಪೂರೈಸಿದ್ದು 20'18'ರಲ್ಲಿ! ಇನ್ನೀಗ ಅಯೋಧ್ಯೆಯಲ್ಲಿ ಮಂದಿರಕ್ಕೆ ಪವರ್ ಚಾರ್ಜ್   ಮಾಡಿರುವ ಕೆಲಸವನ್ನು ಮಂತ್ರಾಲಯದ ಗುರುಗಳ ಅಮೃತ ಹಸ್ತದಿಂದ ಚಾಲನೆ ನೀಡಲು ನಿರ್ಧರಿಸಿರುವುದೂ ಬಹುತೇಕ ಇದೇ ಬರುವ ಡಿ18ರಂದೇ!

Leave a Comment