ಬಂಟ್ವಾಳ ತಾಲೂಕಿನ ಕೊಡ್ಮಾಣ್ ಗ್ರಾಮದ ಕೊಡ್ಮಾಣ್ ದೇವದಾಸ ಶೆಟ್ಟಿ ಮತ್ತು ಸುಮೀತಾ ಡಿ ಶೆಟ್ಟಿ ದಂಪತಿಗಳಿಗೆ ಜೂ. 13ರಂದು ತಮ್ಮ ವೈವಾಹಿಕ ಜೀವನದ 40ನೇ ವರ್ಷದ ಸಂಭ್ರಮ.
ಕೊಡ್ಮಾಣ್ ದೇವದಾಸ ಶೆಟ್ಟಿಯವರು ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಗುರುತಿಸಿ ಕೊಂಡವರು, ಹಲವಾರು ಮಂದಿಗೆ ಸಹಾಯಹಸ್ತ ನೀಡಿದವರು,ಕಳೆದ ಮೂರು ವರುಷದ ಅವಧಿಯಲ್ಲಿ ಫರಂಗಿಪೇಟೆ ವಲಯ ಬಂಟರ ಸಂಘದ ಅಧ್ಯಕ್ಷರಾಗಿ ಮನೆ ನಿರ್ಮಾಣ, ಮದುವೆ, ಅರೋಗ್ಯ, ಶಿಕ್ಷಣದಿಂದ ವಂಚಿತ ರಾದವರಿಗೆ ತನ್ನ ತಂಡದೊಂದಿಗೆ ಹಾಗೂ ಇತರ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸಹಾಯ ಹಸ್ತ ನೀಡಿರುತ್ತಾರೆ.
ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಸ್ಥಾಪಕ ಸದಸ್ಯರಾಗಿ, ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿಯಾಗಿ, ಫರಂಗಿಪೇಟೆ ಶ್ರೀ ಗಣೇಶೋತ್ಸವ, ಶ್ರೀ ಶಾರಾದೋತ್ಸವ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಕೊಡ್ಮಾಣ್ ಶ್ರೀ ಶಾರಾದೋತ್ಸವ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಮಾಜಿ ನಿರ್ದೇಶಕರಾಗಿ, ಫರಂಗಿಪೇಟೆ
ಶ್ರೀ ಆಂಜನೇಯ ದೇವಸ್ಥಾನ, ಕಡೆಗೋಳಿಯ ಪೊಳಲಿ ದ್ವಾರ,ಸುಜೀರು ದೈವಸ್ಥಾನ, ಕುಮ್ಡೇಲ್ ಕೊರ್ದಬ್ಬು ದೈವಸ್ಥಾನ, ನಾಣ್ಯ ಕ್ಷೇತ್ರ ಮುಂತಾದ ಧಾರ್ಮಿಕ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.
ನಿರಂತರ 41ವರ್ಷ ಅಯ್ಯಪ್ಪ ಮಾಲಾಧಾರಿಯಾಗಿ ಶಬರಿಮಲೆ ಕ್ಷೇತ್ರಕ್ಕೆ ಯಾತ್ರೆ ಮಾಡಿ 200ಕ್ಕೂ ಅಧಿಕ ಬಾರಿ ಅಯ್ಯಪ್ಪ ದೇವರ ದರುಶನ ಪಡೆದವರು,ಸುಮಾರು 2000ಕ್ಕೂ ಅಧಿಕ ಯಾತ್ರಾರ್ಥಿಗಳನ್ನು ಶಬರಿಮಲೆ ಸನ್ನಿದಿಗೆ ಕರೆದುಕೊಂಡು ಹೋದ ಪುಣ್ಯ ಇವರಿಗೆ ಸಲ್ಲುತ್ತದೆ.
ಕದ್ರಿ ಪೆಟ್ರೋಲ್ ಬಂಕ್ ನಲ್ಲಿ 43ವರ್ಷ ನೌಕರರಾಗಿ ನಿವೃತ್ತಿಹೊಂದಿ, ಪ್ರಸ್ತುತ ದಿ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಇವರ ಪುತ್ರ ಭುವನೇಶ್ ಪಚ್ಚಿನಡ್ಕ ಮಾಲಕತ್ವದ ಶುಭಲಕ್ಷ್ಮಿ ಸಭಾಂಗಣ ಬೆಂಜನಪದವು ಇಲ್ಲಿ ಸೇವೆ ಸಲ್ಲಿಸಿ ಇದೀಗ ವೈವಾಹಿಕ ಜೀವನದ 40ರ ಸಂಭ್ರಮದಲ್ಲಿರುವ ದಂಪತಿಗಳ ಮುಂದಿನ ಜೀವನ ಸುಖ, ಶಾಂತಿ,ನೆಮ್ಮದಿಯಿಂದ ಸಾಗಲಿ ಎಂದು ಅಭಿಮಾನಿಗಳ ಹಾರೈಕೆ.














