ಬಿ ಸಿ ರೋಡ್ : ಸೂಕ್ತ ನ್ಯೂಸ್ ಕೇಬಲ್ ವಾಹಿನಿಯ ಉದ್ಘಾಟನಾ ಸಮಾರಂಭ. ನೊಂದವರ ಬಾಳಿನಲ್ಲಿ ಬೆಳಕು ಮೂಡಿಸುವ ಕಾರ್ಯ ಮಾಧ್ಯಮಗಳಿಂದಾಗಲಿ: ಕಣಿಯೂರು ಶ್ರೀ.

Coastal Bulletin
ಬಿ ಸಿ ರೋಡ್ : ಸೂಕ್ತ ನ್ಯೂಸ್ ಕೇಬಲ್ ವಾಹಿನಿಯ ಉದ್ಘಾಟನಾ ಸಮಾರಂಭ. ನೊಂದವರ ಬಾಳಿನಲ್ಲಿ ಬೆಳಕು ಮೂಡಿಸುವ ಕಾರ್ಯ ಮಾಧ್ಯಮಗಳಿಂದಾಗಲಿ: ಕಣಿಯೂರು ಶ್ರೀ.

ಬಂಟ್ವಾಳ: ಸೂಕ್ತ ಮೀಡಿಯಾ ನೆಟ್ವರ್ಕ್ ಸಂಸ್ಥೆಯ ಸೂಕ್ತ ನ್ಯೂಸ್ ಕೇಬಲ್ ವಾಹಿನಿಯ ಉದ್ಘಾಟನಾ ಸಮಾರಂಭವು ಬಿ.ಸಿ.ರೋಡಿನ ಕೈಕಂಬದಲ್ಲಿರುವ ಡಾ.ಜಗದೀಶ್ ರೈ ಆರ್ಕೆಡ್ ನ 2ನೇ ಮಹಡಿಯಲ್ಲಿ ಮಾ. 12ರಂದು ಬುಧವಾರ ನಡೆಯಿತು.

ಕಣಿಯೂರು ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಅವರು ಸೂಕ್ತ ನ್ಯೂಸ್ ಕಚೇರಿಯನ್ನು ಹಾಗೂ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೊಡಂಕಾಪು ಇನೆಂಟ್ ಜೀಸಸ್ ಚರ್ಚ್ ಧರ್ಮಗುರು ವಂ. ವಲೇರಿಯನ್ ಎಸ್. ಡಿಸೋಜ ಅವರು ನ್ಯೂಸ್ ರೂಮ್ ಅನ್ನು ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಶೀರ್ವಚನಗೈದ ಕಣಿಯೂರು ಸ್ವಾಮೀಜಿ ಅವರು ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರಪಂಚದ ಯಾವುದೇ,ಮೂಲೆಯ ಮಾಹಿತಿ ಅರಿಯಲು ಸುದ್ದಿ ವಾಹಿನಿಗಳ ಅಗತ್ಯವಿದೆ ಕೇವಲ ಧನ ಗಳಸುವ ಉದ್ದೇಶವಿರದ ನೊಂದವರ ಬಾಳಿನಲ್ಲಿ ಬೆಳಕು ಮೂಡಿಸುವ ಕಾರ್ಯ ಮಾಧ್ಯಮಗಳಿಂದಾಗಲಿ ಈ ನಿಟ್ಟಿನಲ್ಲಿ ಕೆಲಸ ಮಾಡುವ ಸೂಕ್ತ ವಾಹಿನಿ ಅಭಿವೃದ್ಧಿ ಹೊಂದಲಿ ಎಂದು ನುಡಿದರು

ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ ಬಂಡವಾಳಶಾಹಿಗಳಿಂದ ನಡೆಸಲ್ಪಡುವ ಮಾಧ್ಯಮಗಳಿಗಿಂತ ಭಿನ್ನವಾಗಿ ಜನ ಸಾಮಾನ್ಯರ ಧ್ವನಿಯಾಗಿ ಕರಾರುವಕ್ಕಾಗಿ ವಿಚಾರಗಳನ್ನು ತಿಳಿಸುವ ಮಾಧ್ಯಮವಾಗಿ ಸೂಕ್ತ ವಾಹಿನ ಬೆಳೆಯಲ್ಲಿ ಎಂದರು.

ಈ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಮಂಗಳೂರಿನ ಕುದ್ರೋಳಿ ದೇವಸ್ಥಾನ ಕೋಕಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಬಂಟ್ವಾಳ ಯೋಜನಾ ಪ್ರಾಧಿ ಕಾರ

ಅಧ್ಯಕ್ಷ ಬೇಬಿ ಕುಂದರ್, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಸಜೀಪಮುನ್ನೂರು ಮೂರ್ತದಾರರ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪುಜಾರಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕ್ರನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪದಾಧಿಕಾರಿಗಳಾದ ಬಿ.ಎನ್. ಪುಷ್ಪರಾಜ್, ಭಾಸ್ಕರ್ ರೈ ಕಟ್ಟ, ರೋಟರಿ ಕ್ಲಬ್ ಲೊರಟ್ಟೋ ಹಿಲ್ಸ್ ಅಧ್ಯಕ್ಷ ಸುರೇಶ್ ಕಟ್ಟಿ ಸಿದ್ಧಕಟ್ಟೆ ರೋಟರಿ ಕ್ಲಬ್ ಪೂರ್ವ ಸಹಾಯಕ ರಾಜ್ಯವಾಲ ರಾಘವೇಂದ್ರ ಭಟ್, ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ,ಸಿದ್ಧಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಉದ್ಯಮಿ ಸತೀಶ್ ಕುಮಾರ್ ಬಿ.ಸಿ.ರೋಡ್, ಸೂಕ್ತ ಮೀಡಿಯಾ ಪ್ರವರ್ತಕರಾದ ಜಾನ್ ವಿಲ್ಸನ್ ಲೋಬೊ, ಡೊಮಿನಿಕ್ ಲೋಬೊ, ವಯಲೆಟ್ ಲೋಬೊ, ಕೇಬಲ್ ಆಪರೇಟರ್ ಫ್ರಾನ್ಸಿಸ್ ಲೋಬೋ, ವಕೀಲ ರಿಜಾರ್ಡ್ ಡಿಕೋಸ್ಟ,ಸೂಕ್ತ ಮೀಡಿಯಾ ನೆಟ್ವರ್ಕ್‌ ಪಾಲುದಾರ ನೋವೆಲ್ ಡಿಸೋಜ ಮತ್ತಿತರರು ಭಾಗವಹಿಸಿದ್ದರು.

ನವೀನ್ ಕುಮಾರ್ ಪೆರಾರ ಸ್ವಾಗತಿಸಿದರು. ಆಡಳಿತ ನಿರ್ದೇಶಕ ಪ್ರದೀಪ್ ಪೂಜಾರಿ ಪ್ರಸ್ತಾವಿಸಿದರು. ವಿಜೆ ಮಧುರಾಜ್ ಕಾರ್ಯಕ್ರಮ

ನಿರೂಪಿಸಿದರು. ಬಳಿಕ ಶ್ರೀ ರಾಗ್ ಮ್ಯೂಸಿಕ್ಸ್ ವುತ್ತೂರು ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

Leave a Comment