ಬಂಟ್ವಾಳ :ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಬಾಳ್ತಿಲ ಇದರ ಅಶ್ರಯದಲ್ಲಿ ಸಂಸ್ಥೆಯ ಸಂಸ್ಥಾಪಕರಾದ,ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ,ನ್ಯಾಯವಾದಿ ಶೈಲಜಾ ರಾಜೇಶ್ ಇವರ ನೇತೃತ್ವ ಹಾಗೂ ಅಧ್ಯಕ್ಷತೆ ಯಲ್ಲಿ ಮಾ.12ರಂದು ಆದಿತ್ಯವಾರ ಬಾಳ್ತಿಲ,ಶ್ರೀಶೈಲದಲ್ಲಿ ವಿಜೃಂಭಣೆ ಹಾಗೂ ವಿಶಿಷ್ಟ ರೀತಿಯಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ವಿಶೇಷ ದಿನದಂದು ಸಂಸ್ಥೆಯ ಸಹಭಾಗಿತ್ವದಲ್ಲಿ,ಶ್ರೀಶೈಲ ಕಲಾನೃತ್ಯ ತರಬೇತಿ ಕೇಂದ್ರ ಹಾಗೂ ಭಜನೆ ತರಬೇತಿ ಕಾರ್ಯಗಾರ, ಮಹಿಳಾ ಆರೋಗ್ಯ ಮಾಹಿತಿ ಕಾರ್ಯಗಾರವನ್ನು ಶ್ರೀಮತಿ ನೀಲಮ್ಮ ಉದ್ಘಾಟಿಸಿದರು..ಯೋಗ ತರಬೇತಿ ಮತ್ತು ಅದರ ಉಪಯೋಗ ಬಗ್ಗೆ ಶ್ರೀಮತಿ ತುಳಸಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ನಡೆಸಿಕೊಟ್ಟರು.
ಗ್ರಾಮೀಣ
ಮಹಿಳಾ ಸಾಧಕಿ ಶ್ರೀಮತಿ ತುಳಸಿ,ಶ್ರೀಮತಿ ನೀಲಮ್ಮ,ಶ್ರೀಮತಿ ಹೊನ್ನಮ್ಮ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.ಶ್ರೀಮತಿ ಶಾರದಾ ಜಿ ಬಂಗೇರ ಇವರು ಮಹಿಳೆಯರಿಗೆ ಪಾರ್ದಾನ,ಕಬಿತೆ ಯನ್ನು ಹೇಳಿದರು,ವೇದಿಕೆಯಲ್ಲಿ ಡಾ. ರಾಜೇಶ್ ಪೂಜಾರಿ, ಭಾಸ್ಕರ್ ಉಪಸ್ಥಿತರಿದ್ದರು,ಕಾರ್ಯಕ್ರಮದ ನಿರೂಪಣೆಯನ್ನು ಶೌರ್ಯ ನಡೆಸಿಕೊಟ್ಟರು.ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು,ಮಹಿಳೆಯರು ಬಹಳ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗಿಯಾದರು.ಬಳಿಕ ವಿವಿಧ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.














