Coastal Bulletin

ಬಂಟ್ವಾಳ : ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ ಎರಡನೇ ದಿನದ ಸಂಜೆಯ ಸಭಾ ಕಾರ್ಯಕ್ರಮವು ವಾಮದಪದವು ಬಸ್ತಿಕೋಡಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ‌‌.ವಕ್ತಾರ ಅಮೃತ್ ಶೆಣೈ ಮಾತನಾಡಿ, ಗ್ರಾ.ಪಂ.ಚುನಾವಣೆಗೂ ಮೋದಿ ಮತ ಕೇಳುವ ಪರಿಸ್ಥಿತಿ ಬರಬಹುದು. ಇಡೀ ದೇಶವನ್ನು ಲೂಟಿ ಮಾಡಿ ಅಂಬಾನಿ,ಅದಾನಿ ಕೈ ನೀಡುವುದೇ ಮೋದಿ ಸಾಧನೆ ಎಂದು ಆರೋಪ ಮಾಡಿದರು. ರಮಾನಾಥ ರೈ ಅವರು ಮತ್ತೆ ಸಚಿವರಾಗಿ ಗೂಟದ ಕಾರಿನಲ್ಲಿ ಹೋಗುತ್ತಾರೆ ಆದರೆ ಕಾರ್ಯಕರ್ತರು ಮೈಮರೆಯದೆ ಕೆಲಸ ಮಾಡಿ ಎಂದು ಅವರು ಮನವಿ ಮಾಡಿದರು .

ಧಾರ್ಮಿಕ ಕಾರ್ಯಗಳನ್ನು ನಿಜವಾದ ಭಕ್ತಿಯಿಂದ ಮಾಡಿದ ವ್ಯಕ್ತಿ ರಮಾನಾಥ ರೈ ಆದರೆ ರಾಮ ಮೆಚ್ಚದ ಎಲ್ಲಾ ಹಲ್ಕಾ ಕೆಲಸಗಳನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಯಾರು ಕೂಡ ಕೋವಿಡಿನಿಂದ ಸಾಯಲಿಲ್ಲ, ಸರಿಯಾದ ಸಂದರ್ಭದಲ್ಲಿ ಚಿಕಿತ್ಸೆ ನೀಡದಿದ್ದರಿಂದ ಅನೇಕರು ಸಾವನಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ,ಬಂಟ್ವಾಳ ಕ್ಷೇತ್ರ ದ ಸಂಪೂರ್ಣ ಅಭಿವೃದ್ಧಿಯನ್ನು ಮಾಡಿದ್ದೇನೆ. ಅನೇಕ ರಸ್ತೆಗಳ ಅಭಿವೃದ್ಧಿ ನನ್ನ ಅವಧಿಯಲ್ಲಿ ನಡೆದಿದೆ ಎಂಬ ಸಂತೋಷ ನನಗಿದೆ. ನಾನು ಯಾವುದೇ ತಪ್ಪು ಕೆಲಸ ನಾನು ಮಾಡಿಲ್ಲ. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಜನ ಆಶೀರ್ವಾದ ಮಾಡಬೇಕು. ಎಂದೆಂದಿಗೂ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದರು.

ಕೆ.ಪಿ.ಸಿ.ಸಿ.ಸಂಚಾಲಕ ಹೇಮನಾಥ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ನ ಅಧಿಕಾರದಲ್ಲಿ ರಮಾನಾಥ ರೈ ಅವರು ಸಚಿವರಾಗಿ ಈ ಹಿಂದಿನ ಐದು ವರ್ಷಗಳಲ್ಲಿ 5 ಸಾವಿರ ಕೋಟಿ ರೂ ಗಳ ಅಭಿವೃದ್ಧಿಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮಾಡಲಾಗಿದೆ ಎಂಬುದಕ್ಕೆ ವಿವರ ನೀಡಿದ್ದೇವೆ. ಬಿಜೆಪಿಯವರಿಗೆ ದಮ್ ಇದ್ದರೆ ಅವರ ಅವಧಿಯಲ್ಲಿ ಆಗಿದೆ ಎನ್ನಲಾದ

2 ಸಾವಿರ ಕೋಟಿ ರೂಗಳ ವಿವರ ನಮ್ಮ ಮುಂದೆ ಇಡಿ ಎಂದು ಅವರು ಸವಾಲು ಹಾಕಿದರು.

ಬೆಳಿಗ್ಗೆ ಅಣ್ಣಳಿಜೆಯಿಂದ ಹೊರಟ ಬಂಟ್ವಾಳ ಪ್ರಜಾಧ್ವನಿ ಯಾತ್ರೆ, ಕರ್ಪೆ, ಸಂಗಬೆಟ್ಟು, ಕುಕ್ಕಿಪಾಡಿ, ಎಲಿಯನಡುಗೋಡು, ಕೊಡಂಬೆಟ್ಟು, ಅಜ್ಜಿಬೆಟ್ಟು, ಚೆನ್ನೈ ತ್ತೋಡಿ ಗ್ರಾಮಗಳಲ್ಲಿ ಸಂಚರಿಸಿ ಸಂಜೆ ವಾಮದಪದವು ಬಸ್ತಿಕೋಡಿಯಲ್ಲಿ ಸಾರ್ವಜನಿಕ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಯಾತ್ರೆಯ ಪ್ರಮುಖ ಪಿಯೂಸ್ ಎಲ್. ರೋಡ್ರಿಗಸ್, ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಂ.ಎಸ್ .ಮಹಮ್ಮದ್, ತಾ.ಪಂ.ಮಾಜಿ ಸದಸ್ಯರಾದ ಅಬ್ಬಾಸ್ ಆಲಿ, ಸಂಜೀವ ಪೂಜಾರಿ, ಗ್ರಾ.ಪಂ.ಅಧ್ಯಕ್ಷೆ ಭಾರತಿ ರಾಜೇಂದ್ರ, ಪುರಸಭಾ ಸದಸ್ಯ ಲೋಲಾಕ್ಷ ಶೆಟ್ಟಿ, ಪ್ರಮುಖರಾದ ಅಮ್ಮು ರೈ ಅರ್ಕಾಡಿ, ಸುದರ್ಶನ ಜೈನ್, ಮಾಯಿಲಪ್ಪ ಸಾಲಿಯಾನ್, ಹೇಮನಾಥ ಶೆಟ್ಟಿ ಕಾವು, ದೇವಪ್ಪ ಕರ್ಕೇರ, ಸುಧಾಕರ ಶೆಣೈ ಖಂಡಿಗ, ವೆಂಕಪ್ಪ ಪೂಜಾರಿ, ಶ್ರೀದರ್ ಪೈ, ಉದಯಕುಮಾರ್ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ, ಸೀತಾರಾಮ ಶಾಂತಿ, ಗಣೇಶ್ ನಾಯಕ್ ಕರ್ಪೆ, ದಿನೇಶ್ ಶೆಟ್ಟಿಗಾರ್, ದಯಾನಂದ ಶೆಟ್ಟಿ, ಸದಾಶಿವ ಬಂಗೇರ, ದೇವಪ್ಪ ಕುಲಾಲ್, ಪ್ರವೀಣ್ ಜೈನ್, ಸಾಮಂತ್ ಜೈನ್ ,ಸುರೇಶ್ ಜೋರಾ, ವಾಸು ಪೂಜಾರಿ,ವನಿತಾ, ಜಯಂತಿ, ನಾಗೇಶ್, ಲಿತೇಶ್, ಜಗದೀಶ್ ಕೊಯಿಲ, ಆನಂದ ಆಚಾರ್ಯ, ಅಶೋಕ್ ಆಚಾರ್ಯ, ಮನೋಹರ ನೆರಂಬೋಳು, ಶಬೀರ್ ಸಿದ್ದಕಟ್ಟೆ, ರಮೇಶ್ ನಾಯಕ್ ರಾಯಿ, ಶಿವಾನಂದ ರೈ,ತಿಮ್ಮಪ್ಪ ಪೂಜಾರಿ,ಡಾ! ರಾಮರಾಯ ಪ್ರಭು , ಮತ್ತಿತರರು ಉಪಸ್ಥಿತರಿದ್ದರು.

ಮಾಣಿ ಗ್ರಾಮಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Leave a Comment