Coastal Bulletin

ಬಂಟ್ವಾಳ: ಇಲ್ಲಿನ ವಗ್ಗ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ವಾತ್ಸಲ್ಯ ಯೋಜನೆಯಡಿ ಉಳಿ ಗ್ರಾಮದ ಅನೆತ್ಯಾರು ಎಂಬಲ್ಲಿ ಶಿಥಿಲ ಗೊಂಡಿದ್ದ ಬಡ ಕುಟುಂಬವೊಂದರ ಮನೆ ಪುನರ್ ನಿರ್ಮಿಸಿ ಗುರುವಾರ ಹಸ್ತಾಂತರಿಸಲಾಯಿತು

ಇಲ್ಲಿನ ನಿವಾಸಿ  ಕಂಚು-ಕಾಂತರ ಇವರಿಗೆ ನೂತನ ಮನೆ ಕೀಲಿಯನ್ನು ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ ಹಸ್ತಾಂತರಿಸಿದರು.

 ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಮೈರ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಜಯಾನಂದ

ಪಿ.,  ಗ್ರಾ.ಪಂ.ಉಪಾಧ್ಯಕ್ಷ ಚಿದಾನಂದ ರೈ ಕಕ್ಯ ಮತ್ತಿತರರು ಉಪಸ್ಥಿತರಿದ್ದರು.

ಜ್ಞಾನ ವಿಕಾಸ ಸಮನ್ವಯಾದಿಕಾರಿ ಪುಷ್ಪಾ ಸ್ವಾಗತಿಸಿ, ಸೇವಾ ಪ್ರತಿನಿಧಿ ರಾಜು ವಂದಿಸಿದರು. ವಗ್ಗ ವಲಯ ಮೇಲ್ವಿಚಾರಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

Leave a Comment