ಹೆಬ್ರಿ : ನೂತನ ಹೆಬ್ರಿ ಜೆಸಿಐ ಘಟಕಾಧ್ಯಕ್ಷರಾಗಿ ಆಯ್ಕೆ ಯಾದ ರೂಪೇಶ್ ನಾಯ್ಕ್ ರವರ ಪದಗ್ರಹಣ ಸಮಾರಂಭವು ಹೆಬ್ರಿ ಅನಂತಪದ್ಮನಾಭ ಸನ್ನಿಧಿ ಸಭಾಂಗಣದಲ್ಲಿ ಫೆ. 9 ರಂದು ನಡೆಯಿತು. 2021 ನೇ ಸಾಲಿನ ಅಧ್ಯಕ್ಷ ಮಂಜುನಾಥ ಕೆ ಶಿವಪುರ ಅವರಿಂದ ಪ್ರತಿಜ್ಞ ವಿಧಿ ಸ್ವೀಕರಿಸಿದ ಆಧ್ಯಕ್ಷ ರೂಪೇಶ್ ನಾಯ್ಕ್ ಮಾತನಾಡಿ ಹೆಬ್ರಿ ಜೆಸಿ ಅಸ್ಮಿತೆಯನ್ನು ಕಾಪಾಡಿಕೊಂಡು ವಲಯಾಧ್ಯಕ್ಷರ ಆಶಯವನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ಮನ್ನೆಡೆಯಲಾಗುವುದು ಆಡಂಬರದ ಕಾರ್ಯಕ್ರಮ ಮಾಡದೆ ಜನರಿಗೆ ತಲುಪುವ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡಲು ಸಿದ್ಧತೆಗಳನ್ನು ಮಾಡಲಾಗುವುದು ಎಂದು ಹೇಳಿದರು














