Coastal Bulletin

ಬಂಟ್ವಾಳ:ಸಮಸ್ತ ಭಕ್ತರ ನಂಬಿಕೆಯ ತಾಣವಾಗಿರುವ ಧಾರ್ಮಿಕ ಕೇಂದ್ರಗಳ ಪುನರ್ ನಿರ್ಮಾಣ ಜೊತೆಗೆ ಪ್ರೀತಿ ಮತ್ತು ಶ್ರದ್ಧಾ ಭಕ್ತಿಗೆ ದೇವರು ಬೇಗನೆ ಒಲಿಯುತ್ತಾರೆ ಎಂದು ಸಭೆಗೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆಗೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ವಾಸ್ತುಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಳ ಇವರು ಧಾರ್ಮಿಕ ಪ್ರವಚನ ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ , ಬಿಜೆಪಿ ಜಿಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಹಿರಿಯ ಪತ್ರಕರ್ತ ಚಂದ್ರಶೇಖರ್ ಪಾಲ್ತಾಡಿ, ಧರ್ಮಸ್ಥಳ

ಯೋಜನಾಧಿಕಾರಿ ಜಯಾನಂದ , ಪ್ರಮುಖರಾದ ಜಯಾನಂದ ಆಚಾರ್ಯ ಕಲ್ಲಡ್ಕ, ಕೆ. ಸಂಜೀವ ಪೂಜಾರಿ ಮೆಲ್ಕಾರ್, ಸತೀಶ್ ಕುಂಪಲ, ಶಂಕರ ಯಾನೆ ಕೋಚ ಪೂಜಾರಿ, ಸತ್ಯಾನಂದ ಪೂಜಾರಿ, ಸದಾಶಿವ ತಲೆಮೊಗರು, ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಬಿ. ರಘು ಸಪಲ್ಯ ಪಾಣೆಮಂಗಳೂರು, ಮಮತಾ ಡಿ.ಎಸ್. ಗಟ್ಟಿ ಮತ್ತಿತರರು ಇದ್ದರು. 

ಕೆ. ರಾಧಾಕೃಷ್ಣ ಆಳ್ವ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸುರೇಶ್ ದೇರಾಜೆ ವಂದಿಸಿದರು. ಅಶೋಕ ಪಕ್ಕಳ ಮತ್ತು ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Comment