ಬಂಟ್ವಾಳ :ಶ್ರೀ ವೀರ ಹನುಮಾನ್ ಮಂದಿರ (ರಿ.) ಸುಜೀರು ದತ್ತನಗರ, ಪುದು ಇದರ 22ನೇ ವಾರ್ಷಿಕೋತ್ಸವವು ಜ15ರಂದು ಸೋಮವಾರ ಮಂದಿರದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ಗಂಟೆ 7.00ರಿಂದ ಗಣಹೋಮ ಬಳಿಕ ಪಂಚಾಮೃತ ಅಭಿಷೇಕ ನಡೆಯಲಿದೆ. 9ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮವು 11ಗಂಟೆಯಿಂದ ನಡೆಯಲಿದ್ದು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನಂ ಒಡಿಯೂರು ಕ್ಷೇತ್ರ
ಇವರು ಆಶೀರ್ವಾಚನ ನೀಡಲಿದ್ದಾರೆ.ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6ರಿಂದ ಭಜನಾ ಸಂಕೀರ್ತನೆ ಬಳಿಕ ಮಂಗಳಾರತಿ, ಪ್ರಸಾದ ವಿತರಣೆ ನಡೆದು ನಂತರ ಬಪ್ಪನಾಡು ಮೇಳದವರಿಂದ "ಶಿವ ದೂತ ಗುಳಿಗೆ" ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















