ಬಿ ಸಿ ರೋಡ್ :ಜ.15ರಂದು ಟೈಲರ್ಸ್ ಸಹಕಾರ ಸಂಘ (ನಿ.)ಇದರ ಉದ್ಘಾಟನೆ ಸಮಾರಂಭ.

Coastal Bulletin
ಬಿ ಸಿ ರೋಡ್ :ಜ.15ರಂದು ಟೈಲರ್ಸ್ ಸಹಕಾರ ಸಂಘ (ನಿ.)ಇದರ ಉದ್ಘಾಟನೆ ಸಮಾರಂಭ.

ಬಂಟ್ವಾಳ :ಟೈಲರ್ಸ್ ಸಹಕಾರ ಸಂಘ (ನಿ.) ಪದ್ಮಾ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣ, ಬಿ.ಸಿ.ರೋಡ್,ಇದರ ಉದ್ಘಾಟನಾ ಸಮಾರಂಭವು ಜ.15 ಸೋಮವಾರ ಬೆಳಿಗ್ಗೆ ಗಂಟೆ 9-00ಕ್ಕೆ ಗೀತಾಂಜಲಿ ಸಭಾಂಗಣ, ಬಿ.ಸಿ.ರೋಡ್ ನಲ್ಲಿ ನಡೆಯಲಿದೆ.

ಟೈಲರ್ಸ್ ಸಹಕಾರ ಸಂಘದ ಉದ್ಘಾಟನೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ, ಉಳಿಪಾಡಿಗುತ್ತು ಮಾಡಲಿದ್ದಾರೆ 

ಸೇಫ್ ಲಾಕರ್ ಉದ್ಘಾಟನೆಯನ್ನು ಅರುಣ್ ರೋಷನ್ ಡಿ'ಸೋಜ ಅಧ್ಯಕ್ಷರು ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ನಿ.) ಇವರು ಮಾಡಲಿದ್ದಾರೆ.

ಸಭಾಧ್ಯಕ್ಷತೆಯನ್ನು ಎಂ ನಾಗೇಶ್ ಅಧ್ಯಕ್ಷರು

ಬಂಟ್ವಾಳ ಟೈಲರ್ಸ್ ಸಹಕಾರಿ ಸಂಘ (ನಿ.) ಮತ್ತು ಅಧ್ಯಕ್ಷರು KSTA ಕ್ಷೇತ್ರ ಸಮಿತಿ ಬಂಟ್ವಾಳ ಇವರು ವಹಿಸಲಿದ್ದಾರೆ.

ದೀಪ ಪ್ರಜ್ವಲನೆಯನ್ನು ಅಶ್ವಿನ್ ಕುಮಾರ್ ರೈ ವಕೀಲರು ಮತ್ತು ನೋಟರಿ ನೆರವೇರಿಸಲಿದ್ದು,ಮುಖ್ಯ ಅತಿಥಿಗಳಾಗಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಎಂ ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment