ಪಂಜಿಕಲ್ಲು: 24ರಂದು ಬಾಲೇಶ್ವರ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ ಜಾತ್ರೆ.

Coastal Bulletin
ಪಂಜಿಕಲ್ಲು: 24ರಂದು ಬಾಲೇಶ್ವರ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ ಜಾತ್ರೆ.

ಬಂಟ್ವಾಳ:ಇಲ್ಲಿನ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯಲ್ಲಿ ಇದೇ 21ರಿಂದ 24ರತನಕ ವಾರ್ಷಿಕ ಬ್ರಹ್ಮಬೈದರ್ಕಳ ಜಾತ್ರೆ ನಡೆಯಲಿದೆ.

ಇದೇ 21ರಂದು ಸಂಜೆ 3 ಗಂಟೆಯಿಂದ ಸಂಕ್ರಾಂತಿ ಸೇವೆ ಮತ್ತು ಅಂಕ ಚೆಂಡು ಆರಂಭಗೊಂಡು ರಾತ್ರಿ 9ಗಂಟೆಗೆ ಕೇಲ್ದೋಡಿಗುತ್ತುವಿನಿಂದ ಭಂಡಾರ ಬಂದು 11 ಗಂಟೆಗೆ ಕೊಡಮಣಿತ್ತಾಯ ದೈವಕ್ಕೆ ಸರ್ವ ಸೇವೆ ನಡೆಯಲಿದೆ. ಅಂದು ರಾತ್ರಿ ಗಂಟೆ 8.30ಕ್ಕೆ ಕಲ್ಲಡ್ಕ ವಿಠಲ ನಾಯಕ್ ಇವರಿಂದ 'ಗೀತಾ ಸಾಹಿತ್ಯ ಸಂಭ್ರಮ' ಕಾರ್ಯಕ್ರಮ ಇದೆ.

ಇದೇ 23ರಂದು ಸಂಜೆ 4.30 ಗಂಟೆಗೆ ಅಂಕ ಚೆಂಡು, ರಾತ್ರಿ 7 ಗಂಟೆಗೆ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳರಿಗೆ ಗ್ರಾಮ ಸಂಕ್ರಾಂತಿ ಸೇವೆ,

ರಾತ್ರಿ 9ಗಂಟೆಗೆ ಸ್ಥಳೀಯ ಆದಿನಾಥ ಸ್ವಾಮಿ ಬಸದಿಯಲ್ಲಿ ಪಂಚಾಮೃತ ಅಭಿಷೇಕ, ರಾತ್ರಿ 10 ಗಂಟೆಗೆ ಕೊಡಮಣಿತ್ತಾಯ ದೈವಕ್ಕೆ ನೇಮೋತ್ಸವ ನಡೆಯಲಿದೆ.

ಇದೇ 24ರಂದು ರಾತ್ರಿ ಗಂಟೆ 8.30ಕ್ಕೆ ಬೈದರ್ಕಳರು ಒಲಿಮರೆಯಿಂದ ಹೊರಟು, 10 ಗಂಟೆಗೆ ಬಾಕಿಮಾರು ಗದ್ದೆಗೆ ಇಳಿಯುವುದು. 12 ಗಂಟೆಗೆ ಕೊಡಮಣಿತ್ತಾಯ ಬೈದರ್ಕಳ ಕಡಸಾಲೆ ಬಲಿ, 2 ಗಂಟೆಗೆ ಬ್ರಹ್ಮರ ಬಲಿ, 4 ಗಂಟೆಗೆ ಬ್ರಹ್ಮಬೈದರ್ಕಳರು ಸುರ್ಯ ಹಾಕಿಕೊಳ್ಳುವುದು, ಮುಂಜಾನೆ 5ಗಂಟೆಗೆ ಮಾಯಂದಾತಿ ದೇವಿ ಉತ್ಸವ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Leave a Comment