Coastal Bulletin

ಮೂಡಬಿದಿರೆ: ಮೂಡಬಿದಿರೆಯ ಮಹಾವೀರ ಕಾಲೇಜು ಸಮೀಪ ಕೊಡಂಗಲ್ಲು ಕೀರ್ತಿನಗರ ಕ್ರಾಸ್ ನಲ್ಲಿ ಗೋಣಿಚೀಲದಲ್ಲಿ ಗೋವಿನ ತಲೆ ಕಂಡುಬಂದಿದೆ.

ಮೂಡಬಿದಿರೆಯ ಪೊಲೀಸರು ಸ್ಥಳಕ್ಕೆ ಬಂದು ಗೋವಿನ ತಲೆಯನ್ನು ತೆರವುಗೊಳಿಸಿದರು. ಈ ಘಟನೆಯನ್ನು ಮೂಡಬಿದಿರೆಯ ಹಿಂದೂ ಜಾಗರಣ ವೇದಿಕೆ ತೀವ್ರವಾಗಿ  ಖಂಡಿಸಿದೆ. ಇದು ಹಿಂದೂಗಳ ಭಾವನೆ ಜೊತೆಗೆ

ಸಮಾಜದಲ್ಲಿ ಅಶಾಂತಿ ವಾತಾವರಣವನ್ನು ಸೃಷ್ಟಿಸಲು ಮಾಡಿರುವ ಕೃತ್ಯ ಇದರ ಹಿಂದೆ ಇರುವವರನ್ನು 48 ಗಂಟೆಯೊಳಗೆ ಬಂಧಿಸಬೇಕು ಇಲ್ಲವಾದಲ್ಲಿ ಠಾಣೆಗೆ ಮುತ್ತಿ ಹಾಕುತ್ತೇವೆ ಎಂದು ಎಚ್ಚರ ಕೊಟ್ಟಿದ್ದಾರೆ.

Leave a Comment