Coastal Bulletin

ಮಂಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಕುರಿತು ಎಡಿಪಿಜಿ ಅಲೋಕ್ ಕುಮಾರ್ ಮಂಗಳೂರಿನಲ್ಲಿ‌ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಬಂಧಿತ ಮೂವರು ಆರೋಪಿಗಳು ಸ್ಥಳೀಯರೇ ಆಗಿದ್ದಾರೆ. ಅಡಿಕೆ ಸರಬರಾಜು ಮಾಡುವ ಸುಳ್ಯದ ನಿವಾಸಿ ಶಿಯಾಬ್ , ಚಿಕನ್ ಸಪ್ಲಯರ್ ರಿಯಾಜ್ ಅಂಕತ್ತಡ್ಕ ,ಹೋಟೆಲ್ ಒಂದರಲ್ಲಿ ಕೆಲಸ ಮಾಡುವ ಬಶೀರ್ ಎಲಿಮಲೆ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.

"ಆರೋಪಿಗಳ‌‌ ಬಗ್ಗೆ ಮಾಹಿತಿ ಮೊದಲೇ ಇತ್ತು. ಆದರೆ ಅವರು ಬೇರೆ ಕಡೆ ಸ್ಥಳ ಬದಲಾಯಿಸುತ್ತಿದ್ದರಿಂದ ‌ಪತ್ತೆ ಹಚ್ಚಲು ತಡವಾಯಿತು. ಹತ್ಯೆಯ ಬಳಿಕ ಅವರು ಕಾಸರಗೋಡಿನ ಮಸೀದಿಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ನಂತರ ಅವರು ಎಲ್ಲಿಗೆ ತೆರಳಿದ್ದಾರೆ ಎಂಬ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಇವರ ಮೇಲೆ ಯಾವುದೇ ಕೇಸ್ ಗಳಿಲ್ಲ. ಇವರಿಗೆ ಪಿ.ಎಫ್.ಐ ಯ ಲಿಂಕ್

ಇದೆಯ ಎಂಬುದರ ಬಗ್ಗೆ ಚಾರ್ಚ್ ಶೀಟ್ ನಲ್ಲಿ ಖಚಿತ ಪಡಿಸಲಿದ್ದೇವೆ. ಮತ್ತು ಹತ್ಯೆ ಯಾವ ಕಾರಣಕ್ಕೆ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಯಲಿದೆ."

ಈ ಕೃತ್ಯ ಕ್ಕೆ ಆರು ವಾಹನಗಳನ್ನು ಬಳಸಿದ್ದು,ವಾಹನ ಮತ್ತು ಕೃತ್ಯ ಕ್ಕೆ ಬಳಸಿದ ಉಪಕರಣಗಳನ್ನು ಬಚ್ಚಿಟ್ಟಿದ್ದಾರೆ. ತನಿಖೆಯ ಸಂಪೂರ್ಣ ಮಾಹಿತಿಯನ್ನು ಎನ್.ಐ ಗೆ ನೀಡಲಿದ್ದೇವೆ ನಂತರ ಅವರು ತನಿಖೆ ಮುಂದುವರೆಸಲಿದ್ದಾರೆ.


Leave a Comment