ಬಂಟ್ವಾಳ :ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಸಂಸ್ಥೆ ವಿನ್ಯಾಸಗೊಳಿಸಿಸದ ಸಾರಿಗೆ ಸುರಕ್ಷಾ-ಐಸಿಯು ಬಸ್' ಇಲ್ಲಿನ ಬಿ.ಸಿ.ರೋಡು ಕೆಎಸ್‌ಆರ್‌ಟಿಸಿ ಡಿಪೋಗೆ ಬಂದಿದೆ.
ಅವಿಭಜಿತ ಮತ್ತು ಕೊಡುಗು ಜಿಲ್ಲೆ ಒಳಗೊಂಡಂತೆ ಮಂಗಳೂರು ಮತ್ತು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಈ ಬಸ್ ಬಂಟ್ವಾಳಕ್ಕೆ ಬಂದಿದೆ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಜೂ. ೧೭ರಂದು ಉಪಮುಖ್ಯಮಂತ್ರಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಐಸಿಯು ಬಸ್ಸಿನ ಬಗ್ಗೆ ಬೇಡಿಕೆ ಮುಂದಿಟ್ಟಿದ್ದರು.
ಆಂಬ್ಯುಲೆನ್ಸ್ ರೀತಿಯಲ್ಲೇ ಬಸ್ಸಿಗೆ
ಸೈರನ್ ಅಳವಡಿಸಲಾಗಿದ್ದು, ಒಳಗೆ ಮಿನಿ ಕ್ಲಿನಿಕ್ ಮಾದರಿಯಲ್ಲಿ ಐದು ಬೆಡ್, ಪ್ರತಿ ಬೆಡ್ ಗೂ ಆಕ್ಸಿಜನ್ ವ್ಯವಸ್ಥೆ, ರೋಗಿಗಳ ರಕ್ತದೊತ್ತಡ, ಆಕ್ಸಿಜನ್ ಪ್ರಮಾಣ, ಇಸಿಜಿ, ತಾಪಮಾನ ಪರೀಕ್ಷೆಗೆ ಮಾನಿಟರ್ ವ್ಯವಸ್ಥೆ ಇದೆ. ವೆಂಟಿಲೇಟರ್ ಅಳವಡಿಸುವ ಸೌಲಭ್ಯ, ತುರ್ತು ಔಷಧಿ ಸಹಿತ ಜನರೇಟರ್ ವ್ಯವಸ್ಥೆಯೂ ಇದೆ. ನೋಟಿಸ್ ಬೋರ್ಡ್, ವಿಶೇಷ ಬರಹಗಳು ಕೂಡ ಇದೆ.















