Coastal Bulletin

ಮಂಗಳೂರು:ಕೋಮು ಸೂಕ್ಷ್ಮ ಜಿಲ್ಲೆ ಎಂದೇ ಗುರುತಿಸಲಾದ‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರೂಪದ ಸೌಹಾರ್ದತೆ ಪ್ರಸಂಗವೊಂದು ಬೆಳಕಿಗೆ ಬಂದಿದೆ.ತೀರಾ ಬಡ ಕುಟುಂಬದ ಹಿಂದೂ ಯುವತಿಯ ಮದುವೆಯೊಂದನ್ನು ಮುಸ್ಲಿಂ ಕುಟುಂಬಗಳೇ ಮುಂದೆ ನಿಂತು ಮದುವೆ ಮಾಡುವ ಮೂಲಕ ಸೌಹಾರ್ದತೆ ಮೆರೆದ ಪ್ರಸಂಗ ಮಂಗಳೂರಿನ ಉಳ್ಳಾಲದಲ್ಲಿ ಬೆಳಕಿಗೆ ಬಂದಿದೆ.

ದ.ಕ.ಜಿಲ್ಲೆಯ ಉಳ್ಳಾಲದ ಅಲೇಕಳದ ಮಂಚಿಲ ಸಮೀಪದ ನಿವಾಸಿ ದಿ.ಕೇಶವ ಕರ್ಕೆರ ಅವರ ಪತ್ನಿ ಗೀತಾ ಒಂದು ಹೊತ್ತಿನ ಊಟಕ್ಕೂ ಇಲ್ಲದೆ ಕಷ್ಟದ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದರು. ಇವರ ಎರಡನೇ ಮಗಳು ಕವನಾಳ ವಿವಾಹ ದಿನ ಹತ್ತಿರ ಬರುತ್ತಿದ್ದರೂ, ದುಡ್ಡ ಹೊಂದಿಸಲು ಈ ಬಡ ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ.ಅಳೇಕಲದ ಎಂ.ಕೆ.ಕುಟುಂಬಸ್ಥರು ಎಂಬ ಮುಸ್ಲಿಂ ಕುಟುಂಬ ಬಡತನದಲ್ಲಿದ್ದ ಈ ಹಿಂದು ಕುಟುಂಬದ ಹೆಣ್ಣು ಮಗಳ ಮದುವೆಗೆ  ಆಸರೆಯಾಗಿ ಹೆಣ್ಣು ಮಗಳ ಮದುವೆಯನ್ನು ಹಿಂದು ಸಂಪ್ರದಾಯದಂತೆಯೇ ನೆರವೇರಿಸಿ ಹಿಂದೂ -ಮುಸ್ಲಿಂ ಸೌಹಾರ್ದಕ್ಕೆ ಸಾಕ್ಷಿಯಾಗಿದ್ದರೆ.

ಮಂಗಳೂರಿನ ಶಕ್ತಿನಗರದಲ್ಲಿ ವಾಸವಿದ್ದ ಗೀತಾ ಅವರ ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇವರಿಗೆ ಇಬ್ಬರು ಹೆಣ್ಮಕ್ಕಳಿದ್ದು, ಸಾಲ ಮಾಡಿ ಹಿರಿಯ ಮಗಳ

ಮದುವೆಯನ್ನು ನೆರವೇರಿಸಿದ್ದರು . ಸಾಲ ತೀರಿಸಲು ಮನೆಯನ್ನೇ ಮಾರಿದ್ದರು. ಮನೆ ಮಾರಿದ ಬಳಿಕ ಗೀತಾ, ಮಗಳು ಕವನಾಳೊಂದಿಗೆ‌ ಮಂಚಿಲಕ್ಕೆ ಬಂದು ನೆಲೆಸಿದ್ದರು. ರೇಣುಕಾ ಅಲ್ಲಲ್ಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ ಕೋವಿಡ್ ಎರಡನೇ ಅಲೆಯಿಂದ ಕೆಲಸ ಕಳೆದುಕೊಂಡರು. ಈ ನಡುವೆ ಕವನಾಳಿಗೆ ಕೇರಳದ ವರ ರಂಜಿತ್ ಜತೆ ವಿವಾಹ ನಿಶ್ಚಯವಾಗಿತ್ತು.ಇದನ್ನು ಅರಿತ ಎಂ.ಕೆ.ಕುಟುಂಬದ ಸದಸ್ಯರಾದ ರೆಹಮಾನ್ ಮತ್ತು ಹಂಜಾ ಗೀತಾರ ನೆರವಿಗೆ ಧಾವಿಸಿದರು. ಮಾತ್ರವಲ್ಲ, ಮದುವೆಯ ಖರ್ಚು ವೆಚ್ಚದ ಭರವಸೆ ನೀಡಿ,ಶನಿವಾರ ಎಂ.ಕೆ. ಕುಟುಂಬಸ್ಥರಾದ ಹಂಜಾ ಅವರ ಮನೆಯಲ್ಲೇ ಮೆಹಂದಿ ಶಾಸ್ತ್ರ ನಡೆದಿದ್ದು, ಭಾನುವಾರ ತಲಪಾಡಿ ದೇವಿಪುರ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮದುವೆಯೂ ನೆರವೇರಿದೆ.

Leave a Comment