ಬಿ ಸಿ ರೋಡ್: ನವಿಕೃತ ಹೋಟೆಲ್ ರಂಗೋಲಿ ಸೂಟ್ಸ್ ಮತ್ತು ರೆಸ್ಟ್ರೋ ಬಾರ್ ಉದ್ಘಾಟನೆ

Coastal Bulletin
ಬಿ ಸಿ ರೋಡ್: ನವಿಕೃತ ಹೋಟೆಲ್ ರಂಗೋಲಿ ಸೂಟ್ಸ್ ಮತ್ತು ರೆಸ್ಟ್ರೋ ಬಾರ್ ಉದ್ಘಾಟನೆ

ಬಂಟ್ವಾಳ: ಕಳೆದ 24 ವರ್ಷಗಳ ಅವಧಿಯಲ್ಲಿ ವ್ಯವಹಾರಿಕ ಚಟುವಟಿಕೆ ಜೊತೆಗೆ ಸಾಮಾಜಿಕ ಮತ್ತು ಧಾರ್ಮಿಕತೆಯೊಂದಿಗೆ ಮಾನವೀಯತೆಗೆ ಒತ್ತು ನೀಡುವ ಮೂಲಕ ರಂಗೋಲಿ ಹೋಟೆಲ್ ಸಂಸ್ಥೆ ಬೆಳ್ಳಿಹಬ್ಬದ ಸನಿಹದಲ್ಲಿ ಜನತೆಗೆ ಹತ್ತಿರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ  ಡಾ. ಎಂ. ಮೋಹನ್ ಆಳ್ವ ಹೇಳಿದರು.

ಇಲ್ಲಿನ ಬಿ.ಸಿ.ರೋಡಿನಲ್ಲಿ ನವೀಕೃತಗೊಂಡ ಹವಾನಿಯಂತ್ರಿತ ವಸತಿಗೃಹ ಸಹಿತ ಹೋಟೆಲ್ ರಂಗೋಲಿ ಸೂಟ್ಸ್ ಮತ್ತು ರೆಸ್ಟ್ರೋ ಬಾರ್ ಸಂಸ್ಥೆ ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 'ಹೋಟೆಲ್ ಉದ್ಯಮದಲ್ಲಿ ಮಾನವೀಯತೆ ಮತ್ತು ಅತಿಥಿ ಸತ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮ ಯಶಸ್ಸು ದೊರೆತಿದೆ 'ಎಂದರು.

ಬಂಟವಾಳ

ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಭುವನೇಶ್ ಪಚ್ಚಿನಡ್ಕ ಶುಭ ಹಾರೈಸಿದರು.ಸಂಸ್ಥೆ ಪಾಲುದಾರ ಸದಾನಂದ ಶೆಟ್ಟಿ ರಂಗೋಲಿ ಉಪಸ್ಥಿತರಿದ್ದರು.ಇದೇ ವೇಳೆ 50ಕ್ಕೂ ಮಿಕ್ಕಿ ಮಂದಿ ಹೋಟೆಲ್ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ಪಾಲುದಾರ ಚಂದ್ರಹಾಸ ಶೆಟ್ಟಿ ರಂಗೋಲಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮೇಲ್ವಿಚಾರಕ ಸಾಕ್ಷತ್ ಶೆಟ್ಟಿ ವಂದಿಸಿ, ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

Leave a Comment