ಅಲ್ಲಿಪಾದೆ: ಶ್ರೀರಾಮ ಭಜನಾ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸನ ಶಿಬಿರ

Coastal Bulletin
ಅಲ್ಲಿಪಾದೆ: ಶ್ರೀರಾಮ ಭಜನಾ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸನ ಶಿಬಿರ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಬಿಸಿ ಟ್ರಸ್ಟ್ ( ರಿ.) ಬಂಟ್ವಾಳ,,ಕೆ. ಏಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಶ್ರೀರಾಮ ಭಜನಾ ಮಂದಿರ ಅಲ್ಲಿಪಾದೆ, ಮಹಿಳಾ ಜ್ಞಾನವಿಕಾಸ ಕೇಂದ್ರ ಅಲ್ಲಿಪಾದೆ, ನಾವೂರು ಇವರ ಸಹಬಾಗಿತ್ವದಡಿಯಲ್ಲಿ ಅಲ್ಲಿಪಾದೆ ಶ್ರೀರಾಮ ಭಜನ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸನ ಶಿಬಿರ ಮಾರ್ಚ್ 11 ಬುಧವಾರ ಜರಗಿತು.

ಕಾರ್ಯಕ್ರಮವನ್ನು   ವಲಯ ಜನಜಾಗ್ರತಿ ವೇದಿಕೆ ಯ ಅಧ್ಯಕ್ಷರಾದ ಮನ್ಮಥರಾಜ್ ಜೈನ್ ಉದ್ಘಾಟಿಸಿದರು.

 ಗ್ರಾಮಾಭಿವೃದ್ಧಿ ಯೋಜನೆಯ  ತಾಲೂಕು ಯೋಜನಾಧಿಕಾರಿ ಜಯಾನಂದ ಪಿ   ಆರೋಗ್ಯದ ತಪಾಸಣಾ ಅಗತ್ಯತೆ ಮತ್ತು ಆರೋಗ್ಯ ಕಾಪಾಡುವಲ್ಲಿ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಗಳು ಹೇಗಿರಬೇಕೆಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾಜಿ

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೀಲಾವತಿ, ಸಂಜೀವ ಶೆಟ್ಟಿ ಮೀನಲಿ, ನವೀನ್ ಶೆಟ್ಟಿ,  ಗೀತಾ,ವಲಯ ಮೇಲ್ವಿಚಾರಕ ರಾಜೇಶ್ ನಾಯ್ಕ್, ಕೃಷ್ಣಪ್ಪ ಓಡುದಡ್ಕ, ರಘು ಎರುಕಡಪ್ಪು, ಸಂಯೋಜಕಿ ಉಮಾ, ಜ್ಞಾನವಿಕಾಸ  ಸಮನ್ವಯಧಿಕಾರಿ ಸವಿತಾ, ಸೇವಾಪ್ರತಿನಿಧಿಗಳಾದ ವಸಂತಿ, ವಿಜಯ, ಉಷಾ, ಸಿ ಎಸ್ ಸಿ ಸೇವಾದಾರ ರಕ್ಷಿತಾ, ಭವಾನಿ  ಉಪಸ್ಥಿತರಿದ್ದರು.



Leave a Comment