ಕಡೆಗೋಳಿ: ಅಸಮರ್ಪಕ ಚರಂಡಿಗೆ ವ್ಯವಸ್ಥೆ, ಹೆದ್ದಾರಿ ಪಕ್ಕದಲ್ಲೇ ತ್ಯಾಜ್ಯ ನೀರು, ಸಾರ್ವಜನಿಕರ ಆಕ್ರೋಶ

Coastal Bulletin
ಕಡೆಗೋಳಿ: ಅಸಮರ್ಪಕ ಚರಂಡಿಗೆ ವ್ಯವಸ್ಥೆ, ಹೆದ್ದಾರಿ ಪಕ್ಕದಲ್ಲೇ ತ್ಯಾಜ್ಯ ನೀರು, ಸಾರ್ವಜನಿಕರ ಆಕ್ರೋಶ

ಬಂಟ್ವಾಳ:ಮಂಗಳೂರು -ಬಿ ಸಿ ರೋಡ್ ರಾಷ್ಟ್ರೀಯ ಹೆದ್ದಾರಿಯ ಕಡೆಗೋಳಿ ಜಂಕ್ಷನ್ ಸಮೀಪ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಹೆದ್ದಾರಿ ಬದಿಯ ಬಸ್ ನಿಲುಗಡೆ ಸ್ಥಳದಲ್ಲೇ ತ್ಯಾಜ್ಯ ನೀರು ಸಂಗ್ರಹವಾಗಿ ದುರ್ನಾಥ ಬೀರಿ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾತ್ತಿದ್ದು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.


ತಾಲೂಕಿನ ಪುದು-ತುಂಬೆ ಗ್ರಾಮ ವ್ಯಾಪ್ತಿಯ ಕಡೆಗೋಳಿ ಜಂಕ್ಷನ್ ಪಕ್ಕ ಹೆದ್ದಾರಿ ಬದಿಯಲ್ಲಿ ನೂರಾರು ಜನರ ಓಡಾಟವಿರುವ ಸ್ಥಳದಲ್ಲಿ ಚರಂಡಿ ಸ್ಥಗಿತಗೊಂಡು ಮುಂದೆ ತ್ಯಾಜ್ಯ ನೀರು ಸಾಗಲು ವ್ಯವಸ್ಥೆ ಇಲ್ಲದೆ ಹೆದ್ದಾರಿಯಲ್ಲೇ ತ್ಯಾಜ್ಯ ನೀರು

ಸಂಗ್ರಹವಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ದುರ್ನಾಥ ಬೀರುವ ಜೊತೆಗೆ ಅದೇ ಸ್ಥಳದಲ್ಲಿ ಬಸ್ ನಿಲುಗಡೆ ಇರುದರಿಂದ ಪ್ರಯಾಣಿಕರಿಗೆ ಬಸ್ ಹತ್ತಲು ಇಳಿಯಲು ಸಮಸ್ಯೆಯಾಗಿದೆ, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ, ಶೀಘ್ರ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಸಂಬಂದಪಟ್ಟವರಿಗೆ ಆಗ್ರಹಿಸಿದ್ದಾರೆ.

Leave a Comment