ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ - ಇವರ ಆಶ್ರಯದಲ್ಲಿ ಜ। ಕೆ.ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆಇವರ ಸಹಯೋಗದೊಂದಿಗೆ 130ನೇ ರಕ್ತದಾನ ಶಿಬಿರ ಮಾ.16ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 9ರಿಂದ 1ರ ವರೆಗೆ ಸೇವಾಂಜಲಿ ಸಭಾಗೃಹ, ಫರಂಗಿಪೇಟೆಯಲ್ಲಿ ನಡೆಯಲಿದೆ.
ಶಿಬಿರದ ಉದ್ಘಾಟನೆಯನ್ನು ಎಸ್. ವಿಜಯ ಪ್ರಸಾದ್, ಪೊಲೀಸ್ ಉಪಾಧೀಕ್ಷಕರು, ಬಂಟ್ವಾಳ ನೆರವೇರಿಸಲಿದ್ದು,ಎನ್. ಪ್ರಕಾಶ್ ಕಾರಂತ, ಮಾಜಿ ಗವರ್ನರ್, ರೋಟರಿ
ಜಿಲ್ಲೆ ಇವರು ಉಪಸ್ಥಿತ ರಿರುವರು ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣ ಕುಮಾರ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














