ಮಂಗಳೂರು ವಿಶ್ವವಿದ್ಯಾನಿಲಯವು ಪದವಿ ವಿಭಾಗದ ರ್ಯಾಂಕ್ ಪಟ್ಟಿ ಪ್ರಕಟಿಸಿದ್ದು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು.ನಿರೀಕ್ಷಾ 2022ನೇ ಸಾಲಿನ ಬಿಕಾಂ ಪರೀಕ್ಷೆಗಳಲ್ಲಿ 4ನೇ ರ್ಯಾಂಕ್ ಪಡೆದಿದ್ದಾಳೆ.
ಇವಳು 6 ಸೆಮಿಸ್ಟರ್ಗಳಲ್ಲಿ ಒಟ್ಟು 3500 ಅಂಕಗಳಲ್ಲಿ 3329 ಅಂಕಗಳನ್ನು ಗಳಿಸಿ ಶೇ 95.11% ಅಂಕಗಳೊಂದಿಗೆ ಈ ಸಾಧನೆ ಮಾಡಿದ್ದಾಳೆ. ಶ್ರೀರಾಮ ಪದವಿ ಕಾಲೇಜಿಗೆ ಬಂದಿರುವ
2ನೇ ರ್ಯಾಂಕ್ ಇದಾಗಿದ್ದು ಈ ಹಿಂದೆಯೂ ವಾಣಿಜ್ಯ ವಿಭಾಗದಲ್ಲಿ 9ನೇ ರ್ಯಾಂಕ್ನ್ನು ಕಾಲೇಜು ಗಳಿಸಿತ್ತು. ಇವರಿಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿದೆ














