Coastal Bulletin

ಬಂಟ್ವಾಳ :ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ) ಬಾಳ್ತಿಲ ಇದರ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಫೆ.12ರಂದು ಆದಿತ್ಯವಾರ ಮಧ್ಯಾಹ್ನ 2 ರಿಂದ ಬಾಳ್ತಿಲ ಶ್ರೀಶೈಲ ದಲ್ಲಿ ವಿವಿಧ ತರಬೇತಿ ಕಾರ್ಯಗಾರಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಈ ಸಂದರ್ಭದಲ್ಲಿ ಶ್ರೀ ಶೈಲ ಕಲಾ ನೃತ್ಯ ತರಬೇತಿ ಮತ್ತು ಭಜನಾ ತರಬೇತಿ ಉದ್ಘಾಟನೆಗೊಳ್ಳಲಿದೆ. ಯೋಗ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ, ಮಹಿಳೆಯರ ಆರೋಗ್ಯ

ಸಮಸ್ಯೆ ಮತ್ತು ಪರಿಹಾರ ಮಾಹಿತಿ ಕಾರ್ಯಗಾರ, ಮಹಿಳಾ ದಿನಾಚರಣೆಯ ಸಂಭ್ರಮಾಚರಣೆ ಹಾಗೂ ನೃತ್ಯ,ವಿವಿಧ ವಿನೋದಾವಳಿಗಳು ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಶೈಲಜಾ ರಾಜೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment