ಬಂಟ್ವಾಳ:ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ 'ನಮ್ಮ ನಡೆ ಬೂತ್ ಕಡೆ' ಕಾರ್ಯಕ್ರಮದಡಿ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್ ಅಧ್ಯಕ್ಷರ ಮನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಮಂಗಳವಾರ ಭೇಟಿ ನೀಡಿದರು. ಅಧಿಕಾರ ಇಲ್ಲದಾಗ ನಮ್ಮೊಂದಿಗೆ ಇರುವುವವರು ನೈಜ ಕಾಂಗ್ರೆಸ್ಸಿಗರಾಗಿದ್ದು,ನಿಮ್ಮ ಋಣ ಎಂದಿಗೂ ಮರೆಯಲು ಅಸಾಧ್ಯ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಬೂತ್ ಮಟ್ಟದಲ್ಲಿ ಪಕ್ಷ ಬಲಿಷ್ಠಗೊಂಡು ಮುಂದಿನ ಎಲ್ಲಾ ಚುನಾವಣೆ ಎದುರಿಸಲು ಸಾಧ್ಯವಿದೆ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರಾದ ಮಲ್ಲಿಕಾ ವಿ ಶೆಟ್ಟಿ, ಫ್ಲೋಸಿ ಡಿಸೋಜ, ಸುರೇಶ್ ಪೂಜಾರಿ ಜೋರಾ, ಚಂದ್ರಶೇಖರ್ ಶೆಟ್ಟಿ, ಬೂತ್ ಸಮಿತಿ ಅಧ್ಯಕ್ಷರಾದ ರಾಮಚಂದ್ರ ಕಾಯರ್ ಮಾರ್, ತೋಮಸ್ ಸಲ್ಡಾನ್ಹ, ತಾರನಾಥ ಪೂಜಾರಿ, ಸ್ಥಳೀಯ ಗಣ್ಯರಾದ
ಪೂಣರ್ಿಮಾ, ಚಂದ್ರಾವತಿ, ಮುಖಂಡರಾದ ರಾಮಣ್ಣ ಪೂಜಾರಿ, ಪ್ರಭಾಕರ್, ನಿತ್ಯಾನಂದ ಕಲಾಯಿ, ಅರುಣ್ ಪಿಂಟೋ, ವೆಂಕಪ್ಪ ಪೂಜಾರಿ, ಲೋಯ್ಡ್ ಮೊನೊಹರ್ ಡಿಕಾಸ್ಟ, ಚರಣ್, ಸುಮಿತ್ ಸುವರ್ಣ, ಫೆಲಿಕ್ಸ್ ಪಿಂಟೋ, ನಿಚಲ್ ಡಿಸೋಜ, ಮೆಲ್ವಿನ್ ಸಲ್ಡಾನ್ಹ, ಜೋಕ್ಷನ್, ಜೇಮ್ಸ್, ಡೊನಾಲ್ಡ್, ಲಕ್ಷ್ಮಣ ಪೂಜಾರಿ, ದಾಮೋದರ್ ಪೂಜಾರಿ, ಸತೀಶ್, ಸ್ವಸ್ತಿಕ್ ಆಚಾರ್ಯ ,ಪ್ರತಿಭಾ ಸುವರ್ಣ, ಮ್ಯಾಕ್ಸಿಂ ಲೋಬೋ, ಸುಂದರಿ, ಶಾಲಿನಿ, ಶಮಂತ್ ಪೂಜಾರಿ, ವಲೇರಿಯನ್ ಲೋಬೋ, ಫ್ಲೋರಿನ್ ಲೋಬೋ ಇದ್ದರು.














