ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶ, ಜೀರ್ಣೋದ್ಧಾರ ಕಾರ್ಯ ಹಾಗೂ ದೇವಸ್ಥಾನದ ಸಂಪರ್ಕ ರಸ್ತೆ ಅಭಿವೃದ್ಧಿಗೆ ಒಟ್ಟು ಒಂದು ಕೋಟಿ ರೂ. ಅನುದಾನವನ್ನು ಒದಗಿಸಿದ್ದಾರೆ.
ಬ್ರಹ್ಮರಕೂಟ್ಲು-ದರಿಬಾಗಿಲು ರಸ್ತೆ ಡಾಮರೀಕರಣ - 15 ಲಕ್ಷ.
ಮಾಡಂಗೆ- ಕನಪಾಡಿ ರಸ್ತೆ ಕಾಂಕ್ರೀಟ್ - 10 ಲಕ್ಷ.
ಕನಪಾಡಿ-ದೇವಂದಬೆಟ್ಟು ರಸ್ತೆ ಡಾಮರೀಕರಣ - 15 ಲಕ್ಷ.
ದೇವಂದಬೆಟ್ಟು ದೇವಸ್ಥಾನದ ಹಿಂಬದಿ ರಸ್ತೆ ಕಾಂಕ್ರೀಟ್ - 5 ಲಕ್ಷ.
ಮಾಡಂಗೆ-ಪಲ್ಲಮಜಲು ರಸ್ತೆ - 30 ಲಕ್ಷ.
ದೇವಂದಬೆಟ್ಟು ದೇವಸ್ಥಾನ ಮತ್ತು ಬೆದ್ರಾಡಿ ನಾಗರಿಕರಿಗೆ 2 ಕಡೆಗಳಲ್ಲಿ ಕೊಳವೆಬಾವಿ.
ದೇವಸ್ಥಾನದ ಮುಂಭಾಗ ಬೃಹತ್ ತಡೆಗೋಡೆ - 10 ಲಕ್ಷ ಪಂಚಾಯತ್ ಅನುದಾನದಲ್ಲಿ
ನಿರ್ಮಿಸಲಾದ ಚರಂಡಿ ವ್ಯವಸ್ಥೆ - 1 ಲಕ್ಷ.
ದೇವಸ್ಥಾನದ ಹಿಂಬದಿ ರಸ್ತೆ, ಗೋಶಾಲೆ ಮತ್ತು ಶೌಚಾಲಯ ನಿರ್ಮಾಣಕ್ಕೆ ಸ್ವಂತ ಹಣದಿಂದ ಖಾಸಗೀ ಜಮೀನು ಖರೀದಿ. ಅಲ್ಲದೇ ಜಮೀನು ಮಾಲೀಕರಿಗೆ ಪ್ರತ್ಯೇಕ ಜಮೀನು ವ್ಯವಸ್ಥೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ 10 ಲಕ್ಷ ಅನುದಾನ.
ಗೋಶಾಲೆಗೆ ದನಕರುಗಳ ವ್ಯವಸ್ಥೆ.
ಇನ್ನಿತರ ಹಲವಾರು ಕೊಡುಗೆಗಳನ್ನು ಕಳ್ಳಿಗೆ ಗ್ರಾಮಕ್ಕೆ ನೀಡಿದ ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಸಮಿತಿಯು ಧನ್ಯವಾದ ತಿಳಿಸಿದೆ.














