Coastal Bulletin

ಬಂಟ್ವಾಳ: ಇಲ್ಲಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶ ಪ್ರಯುಕ್ತ ರಚಿಸಿದ ಆಮಂತ್ರಣ ಗೀತೆಯ ಚಿತ್ರೀಕರಣವನ್ನು ಬಂಟ್ವಾಳ, ಬ್ರಹ್ಮರಕೂಟ್ಲು, ದೇವಂದಬೆಟ್ಟು ಭಾಗಗಳಲ್ಲಿ ಪೂರ್ತಿಗೊಳಿಸಿ ಸಂಕಲನ ವಿಭಾಗದ ಕೆಲಸಗಳು ಆರಂಭವಾಗಿದೆ. ಮುಂದಿನ ಭಾನುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಂದ ದೇವಂದಬೆಟ್ಟು ದೇವಸ್ಥಾನದ ಪ್ರಾಂಗಣದಲ್ಲಿ ಬ್ರಹ್ಮಕಲಶ ಆಮಂತ್ರಣ ಗೀತೆಯನ್ನು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಎಂದು ಸಮಿತಿಯು ಪ್ರಕಟಣೆ ತಿಳಿಸಿದೆ

ಪ್ರಕೃತಿ ರಮಣೀಯ ತಾಣಗಳ ಚಿತ್ರೀಕರಣ.ಕಳ್ಳಿಗೆ ಗ್ರಾಮದ ಪ್ರಾಕೃತಿಕ ಸೌಂದರ್ಯಗಳ ಅನಾವರಣ ಜೊತೆಗೆ ಬಂಟ್ವಾಳದಲ್ಲಿ ನೇತ್ರಾವತಿ ನದಿಕಿನಾರೆಯನ್ನು ತನ್ನ ಅದ್ಬುತ ಕೈಚಳಕದಿಂದ ಡ್ರೋನ್ ಕ್ಯಾಮೆರಾ ಬಳಸಿ ಚಿತ್ರೀಕರಿಸಿದ್ದಾರೆ ಛಾಯಾಗ್ರಾಹಕ, ನಿರ್ದೇಶಕ ಶ್ರೀಪ್ರಸಾದ್. ಅದ್ಬುತವಾಗಿ ಸಂಯೋಜಿಸಿದ

ಕ್ರಿಯಾತ್ಮಕ ನೈಪುಣ್ಯದ ಚಿತ್ರೀಕರಣದ ಜೊತೆಗೆ ಈಗಾಗಲೇ ತುಳುನಾಡಿನಾದ್ಯಂತ ಸಾಕಷ್ಟು ವೈರಲ್ ಆಗಿರುವ ತುಳುನಾಡ ಕಲಶ ಜಿ.ಎಸ್. ಗುರುಪುರ ಸಾಹಿತ್ಯದ, ಕು.ಧನುಷಾ ಗಾಣಿಗ ಕಲ್ಲಡ್ಕ ಅವರ ಕಂಠಸಿರಿಯಿಂದ ಮೂಡಿಬಂದಿರುವ ಪ್ರಥಮ ಭಕ್ತಿಗೀತೆಯಾಗಿದೆ.

Leave a Comment