Coastal Bulletin

ಬಂಟ್ವಾಳ : ಕರಿಯಂಗಳ ಗ್ರಾಮದ ನಾಗರಿಕರ ಪರವಾಗಿ ಶ್ರೀ ಕ್ಷೇತ್ರ ಪೊಳಲಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾತರಾದ ಪಚ್ಚಿನಡ್ಕ ಸೇಸಪ್ಪ ಕೋಟ್ಯಾನ್ ಹಾಗೂ ಕರ್ನಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಪೊಳಲಿ ಜಯರಾಮಭಟ್ ಇವರಿಗೆ ಪೌರ ಸನ್ಮಾನ ಶ್ರೀ ಕ್ಷೇತ್ರ ಪೊಳಲಿಯ ಅವರಣದಲ್ಲಿ ಗುರುವಾರ ನಡೆಯಿತು.

ಪೊಳಲಿ ರಾಮಕ್ರಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಆಶೀರ್ವಚನಗೈದು,ಈ ಭಾಗದ ಹಿರಿಯರಾದ ಸೇಸಪ್ಪಕೋಟ್ಯಾನ್ ಹಾಗೂ ಜಯರಾಮ ಭಟ್ ಅವರು ಸಮಾಜಕ್ಕಾಗಿ ಬದುಕಿ ತಮ್ಮ ಜೀವನ ಸಾರ್ಥಕ್ಯಗೊಳಿಸಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ವಹಿಸಿ ಮಾತನಾಡಿ,ಸಮಾಜದ ಹಿರಿಯರು,ಯೋಗ್ಯ ವ್ಯಕ್ತಿಗಳಿಬ್ಬರನ್ನು ಸನ್ಮಾನಿಸಿರುವುದು ಅಭಿನಂದನೀಯವಾಗಿದೆ. ಇವರಿಬ್ಬರ ಮಾರ್ಗದರ್ಶನ, ಆರ್ಶೀವಾದ ಈ ಭಾಗದ ಜನರಿಗೆ ಇನ್ನಷ್ಟು ಸಿಗಲಿ ಎಂದು ಆಶಿಸಿದರು.

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ  ಡಾ.

ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ ಅವರು ಅಭಿನಂದನಾ ಭಾಷಣಗೈದರು.

ಸುಬ್ರಾಯ ಕಾರಂತ  ಹಾಗೂ ಕೇಶವ ಪೊಳಲಿ ಸನ್ಮಾನ ಪತ್ರ ವಾಚಿಸಿದರು, ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಸುಕೇಶ್ ಚೌಟ , ಯಶೋಧರ ಪೊಳಲಿ, ಚಂದಶೇಖರ್ ಶೆಟ್ಟಿ. ಬಡಕಬೈಲು, ಯಶವಂತ ಪೊಳಲಿ, ಲೋಕೇಶ್ ಭರಣಿ, ಸೋಮಶೇಖರ್ ಪೊಳಲಿ, ಮೋಹನ್ ಬಿಲ್ವಪತ್ರೆ ಮತ್ತಿತರರು ಉಪಸ್ಥಿತರಿದ್ದರು.

ವೆಂಕಟೇಶ್ ನಾವಡ ಸ್ವಾಗತಿಸಿದರು. ಸುಬ್ರಾಯ ಕಾರಂತ ವಂದಿಸಿದರು. ಬಿ.ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.

Leave a Comment