ಬಂಟ್ವಾಳ:ಪ್ಯಾಲೆಸ್ತಿನ್ ಬೆಂಬಲಿಸಿ ಕಾಂಗ್ರೆಸ್ ನಿರ್ಣಯ : ಬಿಜೆಪಿ ಯುವ ಮೋರ್ಚಾದಿಂದ ಖಂಡನೆ.

Coastal Bulletin
ಬಂಟ್ವಾಳ:ಪ್ಯಾಲೆಸ್ತಿನ್ ಬೆಂಬಲಿಸಿ ಕಾಂಗ್ರೆಸ್ ನಿರ್ಣಯ : ಬಿಜೆಪಿ ಯುವ ಮೋರ್ಚಾದಿಂದ ಖಂಡನೆ.

ಬಂಟ್ವಾಳ :ಜಾಗತಿಕ ಸಮಸ್ಯೆಯಾದ ಭಯೋತ್ಪಾದಕತೆಯನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕು ಎಂಬ ನಿಟ್ಟಿನಲ್ಲಿ ನಮ್ಮ ದೇಶದ ಹೆಮ್ಮೆಯ ಪ್ರಧಾನಿಯವರಾದ ನರೇಂದ್ರ ಮೋದಿಯವರು ಪ್ರಯತ್ನ ಪಡುತ್ತಿರುವಾಗ ಪ್ರಸ್ತುತ ಇಸ್ರೇಲ್ ಮೇಲೆ ನಡೆದಂತಹ ಪ್ಯಾಲೆಸ್ತಿನ್ ಹಮಾಸ್ ಉಗ್ರರ ದಾಳಿಯನ್ನು ನಮ್ಮ ಭಾರತದ ಕಾಂಗ್ರೆಸ್ ಪಕ್ಷ ಬೆಂಬಲಿಸಿರುದನ್ನು ಬಂಟ್ವಾಳ ಬಿಜೆಪಿ ಯುವ ಮೋರ್ಚಾ ಉಗ್ರವಾಗಿ ಖಂಡಿಸಿದೆ.

ಇದೆ ವೇಳೆ ಬಂಟ್ವಾಳ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಕಿಶೋರ್ ಪಲ್ಲಿಪಾಡಿ ಪ್ರತಿಕ್ರಿಯಿಸಿ,ಒಂದು ವೇಳೆ ಇದೇ ಉಗ್ರರ

ದಾಳಿ ನಮ್ಮ ಭಾರತದ ಮೇಲಾದರೆ ಕಾಂಗ್ರೆಸ್ ನ ನಡೆ ಏನು ಮತ್ತು ನಿಮ್ಮ ಬೆಂಬಲ ಯಾರಿಗೆ.? ಎಂದು ಪ್ರಶ್ನಿಸಿದ್ದಾರೆ.

Leave a Comment