ನೆತ್ತರಕೆರೆ: ಅರ್ಧ ಏಕಾಹ ಭಜನೆ ಹಾಗೂ ನವರಾತ್ರಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ.

Coastal Bulletin
ನೆತ್ತರಕೆರೆ: ಅರ್ಧ ಏಕಾಹ ಭಜನೆ ಹಾಗೂ ನವರಾತ್ರಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ.

ಬಂಟ್ವಾಳ :ನವೋದಯ ಮಿತ್ರ ಕಲಾ ವೃಂದ (ರಿ) ಮತ್ತು ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ ಆಶ್ರಯದಲ್ಲಿ ಅ.15ರಂದು ಆದಿತ್ಯವಾರ ನವರಾತ್ರಿ ಹಬ್ಬದ ಪ್ರಯುಕ್ತ ನಡೆಯುವ ವಾರ್ಷಿಕ ವಿಶೇಷ ಭಜನಾ ಮಂಗಳೊತ್ಸವ, ಅರ್ಧ ಏಕಾಹ ಭಜನೆ ಹಾಗೂ ನವರಾತ್ರಿ ಪೂಜೆಯ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಭಜನಾ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ನವೋದಯ ಮಿತ್ರ ಕಲಾ ವೃಂದದ ಗೌರವಧ್ಯಕ್ಷ ಪಿ ಸುಬ್ರಮಣ್ಯ ರಾವ್, ಮಾಜಿ ಅಧ್ಯಕ್ಷ ಸುರೇಶ

ಭಂಡಾರಿ ಅರ್ಬಿ, ಪ್ರಮುಖರಾದ ಭಾಸ್ಕರ್ ಕುಲಾಲ್, ವಿಶ್ವನಾಥ್ ಕುಲಾಲ್,ಮೋಹನ್ ಆಚಾರಿ, ಯೋಗೀಶ್, ಚಂದ್ರಶೇಖರ, ನಾರಾಯಣ ಕಿರೋಡಿಯನ್ ಮತ್ತಿತರರು ಇದ್ದರು.

Leave a Comment