ಬಂಟ್ವಾಳ :ಸಂಸ್ಕೃತಿ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ )ಕಳ್ಳಿಗೆ ಇದರ ಆಶ್ರಯದಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವವು ಅ.20ರಂದು ಶುಕ್ರವಾರ ದೇವಾಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ರಾಜಾಂಗಣದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 6.45ಕ್ಕೆ ಶ್ರೀ ಶಾರದಾ ಮಾತೆಯ ಪ್ರತಿಷ್ಟಾ ಪೂಜೆಯೊಂದಿಗೆ ವೈದಿಕ ಕಾರ್ಯಕ್ರಮ ನಡೆಯಲಿದೆ. 8ಗಂಟೆಗೆ ದೀಪ ಪ್ರಜ್ವಲನದೊಂದಿಗೆ ಮಹೋತ್ಸವ ಉದ್ಘಾಟನೆಗೊಂಡು ಪದ್ಮನಾಭ ರಾವ್ ಕನಪಾಡಿ ಧ್ವಜಾರೋಹಣ ಮಾಡಲಿದ್ದಾರೆ.
ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ.2ಗಂಟೆಯಿಂದ ಕಲ್ಲಡ್ಕ
ವಿಠ್ಠಲ್ ನಾಯಕ್ ಮತ್ತು ಬಳಗದವರಿಂದ "ಗೀತಾ ಸಾಹಿತ್ಯ ಸಂಭ್ರಮ"ಕಾರ್ಯಕ್ರಮ ಜರುಗಲಿದೆ. ಸಂಜೆ 6ರಿಂದ ವಿಸರ್ಜನ ಪೂಜೆಯ ಬಳಿಕ ಶ್ರೀ ಶಾರದಾ ಮಾತೆಯ ಭವ್ಯ ಶೋಭಯಾತ್ರೆಯು ನಡೆಯಲಿದೆ. ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಶ್ರದ್ದಾಭಕ್ತಿಯಿಂದ ಪಾಲ್ಗೊಳ್ಳಬೇಕೆಂದು ಸಮಿತಿಯು ಪ್ರಕಟಣೆ ತಿಳಿಸಿದೆ.















