ಬಂಟ್ವಾಳ: ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಶ್ರಯದಲ್ಲಿ 42ನೇ ವರ್ಷದ ಫರಂಗಿಪೇಟೆ ಗಣೇಶೋತ್ಸವವು ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೇವಾಂಜಲಿ ಸಭಾಂಗಣದಲ್ಲಿ ಸೆ.09ರಂದು ಸೋಮವಾರ ವಿಜೃಂಭಣೆಯಿಂದ ಸಮಾಪನಗೊಂಡಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಾಚನ ನೀಡಿ, ಧರ್ಮ ಶ್ರದ್ದೆಯೊಂದಿಗೆ ಸಿದ್ದಿ ಬುದ್ದಿಯ ಅಧಿಪತಿ ಗಣೇಶನ ಆರಾಧನೆಯ ಮೂಲಕ ಸನಾತನ ಹಿಂದೂ ಧರ್ಮದಲ್ಲಿ ಜಾಗೃತಿ ಮೂಡಿಸಿ, ಸಮಾಜಕ್ಕೆ ತ್ಯಾಗ ಸೇವೆ ಸಲ್ಲಿಸಿ, ನಮ್ಮಲ್ಲಿ ಮಾನವೀಯ ಮೌಲ್ಯವನ್ನು ವರ್ದಿಸೋಣ, ವಿಘ್ನ ನಿವಾರಕ ವಿನಾಯಕ ಎಲ್ಲರಿಗೂ ಅದರ್ಶ ನಾಯಕ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಮಾತನಾಡಿ, ತುಳುನಾಡಿನ ಪರಂಪರೆ ಸಂಸ್ಕೃತಿಯನ್ನು ಮುಂದಿನ ಜನಾಂಗದ ತಲುಪಿಸುವ ಕಾರ್ಯ ಉತ್ಸವ ಆರಾಧನೆಗಳ ಮೂಲಕ ನಡೆಯಲಿ, ಭಾರತದಂತ ಪುಣ್ಯ ಭೂಮಿ ಬೇರೊಂದಿಲ್ಲ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣದಿಂದ ಬಲಿಷ್ಠರದಾಗ ಮಾತ್ರ .ಭಾರತ ಸದೃಢವಾಗಲು ಸಾಧ್ಯ ಎಂದು ಹೇಳಿದರು.
ದ ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಕಲಾವಿದ ಮನೋಜ್ ಕನಪಾಡಿಯವರನ್ನು ಗೌರವಿಸಲಾಯಿತು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ
ಪ್ರಾಸ್ತವಿಕವಾಗಿ ಮಾತನಾಡಿ, ದಾನಿಗಳಿಂದ ವಾರ್ಷಿಕ ಸುಮಾರು 20ರಿಂದ 25ಲಕ್ಷ ರೂ ಹಣ ಸಂಗ್ರಹಿಸಿ ಅದನ್ನು ಸೇವಾ ರೂಪದಲ್ಲಿ ಸಮಾಜಕ್ಕೆ ವಿನಿಯೋಗಿಸುತ್ತಿದ್ದೇವೆ, ಅರೋಗ್ಯ ಶಿಕ್ಷಣ,ಸಾಮಾಜಿಕ,ಧಾರ್ಮಿಕ ಸೇವಾ ಕಾರ್ಯಗಲು ಸೇವಾಂಜಲಿಯಲ್ಲಿ ನಿರಂತರ ನಡೆಯುತ್ತಿದೆ ಎಂದರು.
ವೇದಿಕೆಯಲ್ಲಿ ಉದ್ಯಮಿ ಭುವನೇಶ್ ಪಚಿನಡ್ಕ ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಕೋಶಾಧಿಕಾರಿ ಗೋವಿಂದ ಶೆಣೈ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಸ್ ಅಶೋಕ ಶೆಟ್ಟಿ ಫರಂಗಿಪೇಟೆ, ಉಪಾಧ್ಯಕ್ಷ ಸುರೇಶ್ ಭಂಡಾರಿ ಅರ್ಬಿ, ಪ್ರ.ಕಾರ್ಯದರ್ಶಿ ಪ್ರಶಾಂತ್ ಕುಮಾರ್ ತುಂಬೆ ಉಪಸ್ಥಿತರಿದ್ದರು.
ತಾರಾನಾಥ ಕೊಟ್ಟಾರಿ ತೇವು ಸ್ವಾಗತಿಸಿ, ಅರ್ಜುನ್ ಪೂಂಜ ವಂದಿಸಿದರು,ದೇವದಾಸ ಶೆಟ್ಟಿ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿಸರ್ಜನಾ ಪೂಜೆ ನಡೆದು ಶ್ರೀ ಗಣಪತಿ ದೇವರ ಭವ್ಯ ಶೋಭಯಾತ್ರೆಯು ರಾಜರಸ್ತೆಯಲ್ಲಿ ಕಡೆಗೋಳಿವರೆಗೆ ಸಾಗಿ ಅಲ್ಲಿಂದ ಅದೇ ದಾರಿಯಲ್ಲಿ ಬಂದು ಅರ್ಕುಳದ ನೇತ್ರಾವತಿ ನದಿಯಲ್ಲಿ ವಿಗ್ರಹ ವಿಸರ್ಜಿಸಲಾಯಿತು, ಭಜನೆ ಶಂಖ ಜಾಗಟೆ ಕೊಂಬು ವಾದ್ಯಗಳೊಂದಿಗೆ ಆಕರ್ಷಕ ಟ್ಯಾಬ್ಲೋಗಲು ಮೆರವಣಿಗೆಗೆ ಮೆರಗು ನೀಡಿತು. ಸಮಿತಿಯ ಪದಾಧಿಕಾರಿಗಳು ಸಹಿತ ಸಹಸ್ರಾರು ಭಕ್ತಾದಿಗಳು ಸೇರಿದ್ದರು.















