ದೇವಾಡಿಗ ಸಮಾಜದ ಹಿರಿಯ ಮುಖಂಡ ಭಾಸ್ಕರ್.ಎಂ ದೇವಾಡಿಗ(72) ಸೆ 9ರಂದು ಶುಕ್ರವಾರ ಸಂಜೆ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೃತರು ದೇವಾಡಿಗ ಶ್ರೀ ಪೊಳಲಿ ಷಷ್ಠಿ ರಥ ಸಮರ್ಪಣೆ ಸಮಿತಿಯ ಗೌರವ ಅಧ್ಯಕ್ಷರಾಗಿದ್ದು,ಇದರಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಕದ್ರಿ ದೇವಾಡಿಗ ಗುಜರಾನ್ ಕುಟುಂಬದ ಗುರಿಕಾರ ಆಗಿದ್ದರು. ಕರ್ನಾಟಕ ರಾಜ್ಯ ದೇವಾಡಿಗರ ಸಂಘ
ಮಣ್ಣಗುಡ್ಡೆಯ ಕೇಂದ್ರೀಯ ಸಮಿತಿ ಸದಸ್ಯರಾಗಿದ್ದರು. ತುಳು ಸಿನಿಮಾ ನಿರ್ದೇಶಕ ರಾಕೇಶ್ ಕದ್ರಿಯವರ ತಂದೆ ಇವರು ಕೊಡುಗೈ ದಾನಿಯಾಗಿ ಜನನುರಾಗಿಯಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ಅಗಲುವಿಕೆ ದೇವಾಡಿಗ ಸಮಾಜಕ್ಕೆ ತುಂಬಲಾರದ ನಷ್ಟವಾಗಿರುತ್ತದೆ.














