ಬಂಟ್ವಾಳ: ಸಂಘರ್ಷವಿಲ್ಲದೆ ಸಮಾಜವನ್ನು ಸುಧಾರಣೆ ಮಾಡಿದ ಮಹಾನ್ ವ್ಯಕ್ತಿ ಬ್ರಹ್ಮ ಶ್ರೀನಾರಾಯಣ ಗುರುಗಳು ,ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಹೇಳಿದರು.
ಅವರು ಬಿಸಿರೋಡು ತಾಲೂಕು ಅಡಳಿತ ಸೌಧದ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಸರಕಾರಿ ಮಟ್ಟದಲ್ಲಿ ಆಚರಿಸಿದ ಬಂಟ್ವಾಳ ತಾಲೂಕು ಮಟ್ಟದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂತಹ ಮಹಾನ್ ವ್ಯಕ್ತಿಗಳ ಆದರ್ಶ, ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮಾತ್ರ ಸಂಘರ್ಷವಿಲ್ಲದ ಶಾಂತಿ ಸಮಾಜ ನಿರ್ಮಾಣ ವಾಗುತ್ತದೆ.ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಪಾಲನೆ ಮಾಡಿಕೊಂಡು ಉತ್ತಮ ವ್ಯಕ್ತಿ ಗಳಾಗಿ ಬದಲಾವಣೆ ಆಗುವಂತೆ ಅವರು ಹೇಳಿದರು. ತನ್ನನ್ನು ತಾನು ಸುಧಾರಣೆ ಆಗದೆ ಅಂತಹ ವ್ಯಕ್ತಿಯಿಂದ ಸಮಾಜವನ್ನು ಬದಲಾವಣೆ ಮಾಡಲು ಅಸಾಧ್ಯ ಎಂದು ಅವರು ಹೇಳಿದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ದ ಅಧ್ಯಕ್ಷತುಕಾರಾಂ ಪೂಜಾರಿ ಅವರು ವಿಶೇಷ ಉಪನ್ಯಾಸ ನೀಡಿ, ಶಿಕ್ಷಣಕ್ಕೆ ವಿಶೇಷ ಆಧ್ಯತೆ ನೀಡುವುದರ ಜೊತೆಗೆ ಶೋಷಿತ ವರ್ಗದ ಜನರಿಗೆ ಅರವಿಪುರದಲ್ಲಿ ಶಿವನ ದೇವಾಲಯ ನಿರ್ಮಾಣ ಮಾಡಿದ
ಭಾರತದ ಮೊದಲ ವ್ಯಕ್ತಿ ನಾರಾಯಣ ಗುರುಗಳು ಸಾಮಾಜಿಕ ಪಿಡುಗುಗಳನ್ನು ವಿರೋಧಿಸದವರಲ್ಲಿ ನಾರಾಯಣ ಗುರುಗಳು ಒರ್ವರು.
ಶೋಷಿತರ ವಿರುದ್ಧ ಧ್ವನಿಯಾದವರಲ್ಲಿ ನಾರಾಯಣ ಗುರುಗಳ ಜೊತೆ ಅನೇಕರ ನೆನಪು ಮಾಡಬೇಕಾದ ಅನಿವಾರ್ಯತೆ ಇದೆ.ಮುಂದಿನ ದಿನಗಳು ಹೇಗಿರಬೇಕು ಎಂಬುದರ ಚಿಂತನೆ ಮಾಡಬೇಕಾದ ಸಮಯ ನಮ್ಮ ಮುಂದೆ ಇದೆ,ನಾರಾಯಣ ಗುರು ಸಮಸ್ತ ಶೋಷಿತ ವರ್ಗದ ಪ್ರತಿನಿಧಿ ಎಂದು ಅವರು ಹೇಳಿದರು.ನಾರಾಯಣ ಗುರುಗಳ ಸಿದ್ದಾಂತ , ಬೋಧನೆಗಳನ್ನು ಅಳವಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಮಾಜಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಯುವವಾಹಿನಿ ಅಧ್ಯಕ್ಷ ಗಣೇಶ್ ಪೂಜಾರಿ ಪೂಂಜರಕೋಡಿ ಉಪಸ್ಥಿತರಿದ್ದರು.
ವಿಟ್ಲ ಕಂದಾಯ ನಿರೀಕ್ಷಕ ಕೆ.ಪ್ರಶಾಂತ್ ಶೆಟ್ಟಿ ಸ್ವಾಗತಿಸಿ, ನಾರಾಯಣ ಗೌಡ ವಂದಿಸಿದರು.ಉಪತಹಶೀಲ್ದಾರ್ ನವೀನ್ ಬೆಂಜನಪದವು ಅವರು ಕಾರ್ಯಕ್ರಮ ನಿರೂಪಿಸಿದರು.














