Coastal Bulletin

ಬಂಟ್ವಾಳ :ಸೆ.07ರಂದು ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಜೆಎಫ್ ಎಸ್ ಅಂಶು ಶರಫ್ ಅವರು ಜೇಸಿಐ ಬಂಟ್ವಾಳಕ್ಕೆ ಅಧಿಕೃತ ಬೇಟಿ ನೀಡಿದರು.

ಇವರನ್ನು ರಾಮಲ್ಕಟ್ಟೆ ಯಲ್ಲಿ ಸ್ವಾಗತಿಸಿ, ನಂತರ ವಾಹನ ಜಾಥಾದ ಮೂಲಕ ಕಳ್ಳಿಗೆ ಗ್ರಾಮ ಪಂಚಾಯತಿಗೆ ತೆರಳಿ ಗ್ರಾಮಲೆಕ್ಕಿಗರ ಕಚೇರಿಗೆ ಸ್ಟೀಲ್ ಬೀರುವನ್ನು ಹಾಗೂ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆಗೆ ಬ್ರಹ್ಮರಕೊಟ್ಲು ಗೆ ಕೈ ತೊಳೆಯುವ ಘಟಕವನ್ನು ಇವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭಡಲ್ಲಿ ವಲಯ 15ರ ವಲಯ ಅಧ್ಯಕ್ಷ  ಜೇಸಿಐ ಸೆನೆಟರ್ ರೋಯನ್ ಉದಯ್ ಕ್ರಾಸ್ತಾ ,ವಲಯಾಧಿಕರಿಗಳು, ಜೇಸಿಐ ಬಂಟ್ವಾಳದ ಅಧ್ಯಕ್ಷ ಜೇಸಿ ಹೆಚ್ ಜಿ ಎಫ್ ರೋಶನ್ ಕೆ ರೈ, ನಿಕಟಪೂರ್ವ ಅಧ್ಯಕ್ಷ ಜೇಸಿ ಹೆಚ್

ಜಿ ಎಫ್ ಉಮೇಶ್ ಮೂಲ್ಯ,ಬಂಟ್ವಾಳ ಘಟಕದ ವಲಯಧಿಕರಿಗಳದ ಜೇಸಿ ಸಂತೋಷ್ ಜೈನ್,ಜೆ ಎಫ್ ಎಂ ರಶ್ಮಿ ಶೆಟ್ಟಿ,ಕಾರ್ಯಕ್ರಮ ನಿರ್ದೇಶಕರಾದ ಜೇಸಿ ವಚನ್ ಶೆಟ್ಟಿ,ಜೇಸಿ ಯತೀಶ್ ಕರ್ಕೇರ,ಎಲ್ಲಾ ಪೂರ್ವ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ಲೇಡಿ ಜೇಸಿ ಗಳು,ಉಪಸ್ಥಿತರಿದ್ದರು.

 ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀ ಬಿ ರಮಾನಾಥ ರೈಯವರು ಬ್ರಹ್ಮರಕೊಟ್ಲು ಶಾಲೆಯಲ್ಲಿ ಜೇಸಿಐ ಹಣ್ಣಿನ ತೋಟದಲ್ಲಿ ಸಸಿ ನೆಡುವ ಮೂಲಕ ಬಂಟ್ವಾಳ ಜೆಸಿಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು,ಗ್ರಾಮಾಭಿವೃದ್ದಿ ಸಂಘದ ಅಧ್ಯಕ್ಷರು,ಗ್ರಾಮಪಂಚಾಯತಿ ಸದಸ್ಯರು ಮತ್ತಿತರರು ಉಪಸ್ಥತರಿದ್ದರು.

Leave a Comment