ಬಂಟ್ವಾಳ : ಕುಲಾಲ ಕುಂಬಾರರ ಯುವ ವೇದಿಕೆ ಇದರ ಆಶ್ರಯದಲ್ಲಿ " ಮರಿಯಾಲದ ನೆಂಪು ಮತ್ತು ಕುಂಕುಮ ಬೆಸುಗೆ "ಎಂಬ ಕಾರ್ಯಕ್ರಮವು ಸೆ.11ರ ಆದಿತ್ಯವಾರ ಕುಲಾಲ ಸಮುದಾಯ ಭವನ ಪೊಸಳ್ಳಿ ಬಿಸಿರೋಡ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅಂಬಿಕಾಂಜನೇಯ ಕ್ಷೇತ್ರ ದಾಸಕೋಡಿಯ ಧರ್ಮದರ್ಶಿ ಶ್ರೀ ಶಾಂತಪ್ಪ ಪಂಡಿತ್ ಬೆಳಿಗ್ಗೆ 9 ಗಂಟೆಗೆ ಒಳಾಂಗಣ ಸ್ಪರ್ಧೆಯ ಉದ್ಘಾಟನೆ ಮಾಡಲಿದ್ದಾರೆ. ನಂತರ 9 ಗಂಟೆಯಿಂದ ವಿವಿಧ ಮನೋರಂಜನೆ ಕಾರ್ಯಕ್ರಮಗಳು ಜರಗಲಿದೆ.
ಕುಲಾಲ ಯುವ ವೇದಿಕೆ ಬಂಟ್ವಾಳದ ಅಧ್ಯಕ್ಷ ಸಂತೋಷ್ ಮರ್ತಾಜೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ತುಳು ಸಾಹಿತಿ ಹಾಗೂ ಬರಹಗಾರರು
ಶ್ರೀಮತಿ ಕುಶಾಲಕ್ಷ್ಮೀ ವಿ. ಕಕುಲಾಲ್ ಕಣ್ವತೀರ್ಥ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ ಹಾಗೂ ದೇವರಾಜು ಅರಸು ಪ್ರಶಸ್ತಿ ಪುರಸ್ಕೃತ ಡಾ. ಅಣ್ಣಯ್ಯ ಕುಲಾಲ್ ರಿಗೆ ಸನ್ಮಾನ ನಡೆಯಲಿಕ್ಕಿದೆ.
ಮಧ್ಯಾಹ್ನ 1.30ರಿಂದ ಕುಟುಂಬ ಸದಸ್ಯರ ಕೈ ಅಡುಗೆಯ ಸುಮಾರು 60ಕ್ಕೂ ಹೆಚ್ಚಿನ ಮಳೆಗಾಲದ ಖಾದ್ಯಗಳ ಸಾಮೂಹಿಕ ಉಟೋಪಚಾರ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














