Coastal Bulletin

ಕಲ್ಲಡ್ಕ: "ಕಾಟುಕಾಟಲ್ಲ ಈ ಶರೀರಕ್ಕೆ ನಾಟುವುದು ಈ ಕಾಟು" ಇಂದು ಸ್ಥಾನೀಯ ವಸ್ತುಗಳು ನಮಗೆ ವಿಶೇಷವಾಗಿ ತೋರದೆ ಆಧುನಿಕತೆಯನ್ನು ಒಳಗೊಂಡು ಮೂಲತನವನ್ನು ಮರೆತು ಬೆಳೆಯುವುದೇ ಶ್ರೇಷ್ಠ ಎಂಬ ಭ್ರಮೆಯಲ್ಲಿದ್ದೇವೆ . ನಮ್ಮ ಮನೆಯ ಮಾವು (ಕಾಟು) ಎನಿಸಿದೆ, ಆದರೆ ಆಧುನಿಕತೆಯ ಬೃಹದಾಕಾರದ ಸತ್ವಹೀನ ಪೋಷಕಾಂಶಗಳಿಲ್ಲದ ಕೇವಲ ರುಚಿಗೆ ಪ್ರಾಮುಖ್ಯತೆ ನೀಡುವ ಕಷಿ ನಮಗೆ ಹಿತವೆನಿಸಿದುದು ಖೇದಕರ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಅ.9ರಂದು ವಿದ್ಯಾರ್ಥಿಗಳೇ ಆಯೋಜಿಸಿದ "ಆಸ್ವಾದನಮ್-2022" ಆಹಾರಮೇಳದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ವಾಮದಪದವು ಯಜಮಾನ ಇಂಡಸ್ಟ್ರೀಸ್ ಮಾಲಕ ಟಿ ವರದರಾಜ ಪೈ "ಇಂದು ಜಗತ್ತಿನ ಎಲ್ಲೆಡೆ ಬೇಡಿಕೆ ಇರುವ ಉದ್ಯಮವೆಂದರೆ ಆಹಾರೋದ್ಯಮ. ಜನಸಂಖ್ಯೆ ದಿನದಿಂದದಿನಕ್ಕೆ ಏರುತ್ತಿರುವುದರಿಂದ ಇದೆಂದಿಗೂ ಕಾಲಬಾಹಿರವಾದ ಉದ್ಯಮವಾಗುವುದಿಲ್ಲ, ಅತ್ಯಂತ ಸಣ್ಣ ಬಂಡವಾಳದಿಂದ ತೊಡಗಿ ಬೃಹತ್ ಮೊತ್ತದವರೆಗೆ ಹೂಡಿಕೆ ಆಹಾರೋದ್ಯಮದಲ್ಲಿ ಸಾಧ್ಯ, ಅದಕ್ಕೆ ನೂರಾರು ಉದಾಹರಣೆಗಳು ನಮ್ಮೆದುರಿಗಿದೆ ಹಾಗಾಗಿ ಇಂದಿನ ಯುವಜನರೇ ಉದ್ಯಮಶೀಲರಾಗಿ ಎಂದು ಕರೆ ನೀಡಿದ ಇವರು ದೀಪ ಬೆಳಗಿಸಿ ನವನೀತ (ಮೊಸರು ) ಕಡೆಯುವ ಮೂಲಕ ಸಾಂಪ್ರದಾಯಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅಭ್ಯಾಗತರಾಗಿ ಭಟ್ ಅಂಡ್ ಭಟ್ ಖ್ಯಾತಿಯ ಮನೋಹರ್ ಭಟ್ ಮತ್ತು ಸುದರ್ಶನ್ ಭಟ್ ಬೆದ್ರಾಡಿ ಆಗಮಿಸಿ ಈ ವಿದ್ಯಾಕೇಂದ್ರದ ಕಾರ್ಯಕ್ರಮವನ್ನು ಹೊರಗಡೆ ನಿಂತು ನೋಡುವುದೇ ಒಂದು ಸೌಭಾಗ್ಯ ಎಂದುಕೊಂಡಿದ್ದೆ. ಆದರೆ ಇಂದು ಇಲ್ಲಿಯ ವೇದಿಕೆಯಲ್ಲಿ ಪಾಲು ಪಡೆದುದು ಹೆಮ್ಮೆಯೆನಿಸಿದೆ.

ಆಧುನಿಕತೆಯ ಪ್ರವಾಹದಲ್ಲಿ ನಮ್ಮ ಸಾಂಪ್ರದಾಯಿಕ ಆಹಾರಪದ್ದತಿಗಳು ನಶಿಸುತ್ತಿರುವುದು ಕಳವಳಕಾರಿ ಅದನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಮೇಳಗಳಿಂದ ಸಾಧ್ಯ ಎಂದು ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ರಾಷ್ಟ್ರಸೇವಿಕಾ ಸಮಿತಿ ಹೊಯ್ಸಳ ಪ್ರಾಂತಕಾರ್ಯಕಾರಿಣಿ ಸದಸ್ಯೆಡಾ| ಕಮಲಾ ಪ್ರಭಾಕರ ಭಟ್ ಉಪಸ್ಥಿತರಿದ್ದರು.

ಆಹಾರಮೇಳದಲ್ಲಿ  32 ಸ್ಟಾಲ್ಗಳಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ವೈವಿಧ್ಯಮಯ ತಿನಿಸುಗಳಾದ ಪಕೋಡ, ಸಿಹಿತಿಂಡಿ, ಆಷಾಢ ವಿಶೇಷ, ವಿವಿಧ ಬಗೆಯಚಿಪ್ಸ್, ಜ್ಯೂಸ್, ದೋಸಾ ಐಟಮ್ಸ್, ಸ್ನಾಕ್ಸ್  ಮುಂತಾದ ಸುಮಾರು 125ಕ್ಕೂ ಹೆಚ್ಚು ಖಾದ್ಯಗಳನ್ನು, ತಯಾರಿಸಿ ವಿದ್ಯಾಕೇಂದ್ರದ 3000 ಮಕ್ಕಳಿಗೆ ವಿತರಿಸಿ,ಕಾರ್ಯಕ್ರಮದಯಶಸ್ಸಿಗೆ ಪಾತ್ರರಾದರು ಈ ಮೂಲಕ ವಿದ್ಯಾರ್ಥಿಗಳು ಕಲಿಕೆಯಜೊತೆಗೆ ವ್ಯವಹಾರಜ್ಞಾನವನ್ನು ಪ್ರಾಯೋಗಿಕ ವಾಗಿ ಮೈಗೂಡಿಸಿಕೊಂಡರು.

ಕಾರ್ಯಕ್ರಮವನ್ನು ಪದವಿ ವಿಭಾಗದ ಪ್ರಾಂಶುಪಾಲ ಕೃಷ್ಣಪ್ರಸಾದ್  ಕಾಯರ್ ಕಟ್ಟೆ ಸ್ವಾಗತಿಸಿ,ಅರ್ಥಶಾಸ್ತ್ರ ಉಪನ್ಯಾಸಕಿ ಸಂಧ್ಯಾಕುಮರಿ ಎಸ್ ವಿಟ್ಲ ವಂದಿಸಿ, ರಾಜ್ಯಶಾಸ್ತ್ರಉಪನ್ಯಾಸಕಿ ಜಯಲಕ್ಷ್ಮೀಕಾರ್ಯಕ್ರಮ ನಿರೂಪಿಸಿದರು.

Leave a Comment