ಬಂಟ್ವಾಳ :ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಆಗಸ್ಟ್ 9 ರಂದು ಬಿಸಿ ರೋಡಿನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ರೋಟರಿ ಕ್ಲಬ್ ನ ಸದಸ್ಯರು ಬಹಳ ಅದ್ದೂರಿಯಾಗಿ ತುಳುನಾಡಿನ ಜಾನಪದ ಶೈಲಿಯ ವಿವಿಧ ರೀತಿಯ ಖಾದ್ಯಗಳ ಸಮಾಗಮದಲ್ಲಿ ಎಲ್ಲಾ ಆನ್ಸ್ ಮತ್ತು ಸದಸ್ಯರ ಶ್ರಮದಿಂದ ಆಟಿದ ಕೂಟವು ಬಹಳ ವಿಜ್ರಂಭಣೆಯಿಂದ ಅಧ್ಯಕ್ಷರಾದ ರೋ PHF ಚಿತ್ತರಂಜನ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ರೋ ಸುರೇಶ್ ಕುಮಾರ್ ನಾವೂರ ಮತ್ತು ರೋ ಶನ್ಪಥ್ ಷರೀಫ್ ರವರು ಆಟಿದ ವಿಶೇಷತೆಯ ಬಗ್ಗೆ ಮಾತನಾಡಿದರು, ರೋ ಸುಕುಮಾರ್ ಬಂಟ್ವಾಳ ರವರು ಆಣೆಟ್ಸ್ ಗಳಿಗೆ ವಿವಿಧ ರೀತಿಯ ಮನೋರಂಜನ ಕಾರ್ಯಕ್ರಮ ಮತ್ತು ಆನ್ಸ್ ನವರಿಗೆ ಮನೋರಂಜನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಕ್ಲಬ್ ವತಿಯಿಂದ ಎಲ್ಲಾ ಸದಸ್ಯರಿಗೂ ತಿರಂಗವನ್ನು ನೀಡಲಾಯಿತು, ಕಾಲೇಜು ವಿದ್ಯಾರ್ಥಿ ನಜೀಬ್ರವರ ವಿದ್ಯಾಭ್ಯಾಸಕ್ಕೆ 5000 ರೂಪಾಯಿ ಧನಸಹಾಯ
ಮಾಡಲಾಯಿತು, ಹೊಸತಾಗಿ ಎರಡು ಸದಸ್ಯರನ್ನು ಸೇರ್ಪಡೆ ಮಾಡಲಾಯಿತು, ಖಾದ್ಯಗಳನ್ನು ತಯಾರಿಸಿದ ಆನ್ಸ್ ಸದಸ್ಯೆ ರೀಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಅಣೆಟ್ಸ್ ನವರಿಗೆ ಬಹುಮಾನ ನೀಡಲಾಯಿತು, ಹುಟ್ಟುಹಬ್ಬ ಮತ್ತು ಮದುವೆ ವಾರ್ಷಿಕೋತ್ಸವದ ಆಚರಿಸುವವರಿಗೆ ನೆನಪಿನ ಕಾಣಿಕೆ ನೀಡಲಾಯಿತು, ಲಕ್ಕಿ ರೋಟೆರಿಯನ್ ಆಗಿ ಗೆದ್ದ ಸದಸ್ಯರಿಗೆ ಬಹುಮಾನ ನೀಡಲಾಯಿತು.
ಎಕ್ಸಿಕ್ಯೂಟಿವ್ ಸೆಕ್ರೆಟರಿ ರೋ PHF ಕಿಶೋರ್ ರವರು ಧನ್ಯವಾದ ಸಮರ್ಪಿಸಿದರು, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯವಾಯಿತು.
















