ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಮೊಡಂಕಾಪು, ಶ್ರೀದೇವಿ ಭಜನಾ ಮಂದಿರ ಗಾಂಧಿನಗರ ಕೆದಿಲ, ಶ್ರೀ ದೇವಿ ಸ್ಪೋಟ್ಸ್ ಕ್ಲಬ್ ಗಾಂದಿನಗರ ಕೆದಿಲ, ಯುವ ಶಕ್ತಿ ಕಡೇಶಿವಾಲಯ, ಯುವ ವೇದಿಕೆ ಪೆರಾಜೆ ಇದರ ಆಶ್ರಯದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು, ವೆನ್‌ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಮತ್ತು ನೇತ್ರದಾನ ಮಾಹಿತಿ ಶಿಬಿರ ಕೆದಿಲ ಗಾಂಧಿನಗರದ ಶ್ರೀ ದೇವಿ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.
ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಹಾಗೂ ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ ಶಿಬಿರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕ ಡಾ. ಮನೋಹರ್ ರೈ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ವೆನ್‌ಲಾಖ್ ಆಸ್ಪತ್ರೆಯ ಅಂಗಾಗ ದಾನ ಸಂಯೋಜಕಿ ಲವಿನಾ ಗ್ಲಾಡೀಸ್ ಡಿಸೋಜಾ ಅಂಗಾಗಾ ದಾನದ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಹಾಯ ಗವರ್ನರ್ ಎಲಿಯಾಸ್ ಸ್ಯಾಂಕಿಸ್ಟ್,
ರೋಟರಿ ಕ್ಲಬ್ ಮೊಡಂಕಾಪುವಿನ ಅಧ್ಯಕ್ಷ ಡಾ. ಗೋವರ್ಧನ್ ರಾವ್, ಕಾರ್ಯದರ್ಶಿ ಪಿ. ಎ. ರಹೀಂ, ರೋಟರಿ ಕ್ಬ್ ಬಂಟ್ವಾಳದ ಕಾರ್ಯದರ್ಶಿ ಭಾನುಶಂಕರ್, ಚುನಾಯಿತ ಅಧ್ಯಕ್ಷ ಪ್ರಕಾಶ್ ಬಾಳಿಗ, ಸದಸ್ಯ ಸದಾಶಿವ ಬಾಳಿಗ, ವಿಶ್ವಸ್ಥ ಮಂಡಳಿ ಅಧ್ಯಕ್ಷ ಚೆನ್ನಪ್ಪ ಗೌಡ ಕುದುಮಾನ್, ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮಿಥುನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ ೫೦ ಯುನಿಟ್ ರಕ್ತ ಸಂಗ್ರಹವಾಯಿತು ೨೫ ಮಂದಿ ಅಂಗಾಗ ದಾನಕ್ಕೆ ಹೆಸರು ನೋಂದಾಯಿಸಿ ಕೊಂಡರು.
















