ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ರೋಟರಿ ಕ್ಲಬ್ ಸಭಾಂಗಣದಲ್ಲಿ ನೂತನ ಅಧ್ಯಕ್ಷ ಮಹಮ್ಮದ್ ವಳವೂರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಶುಕ್ರವಾರ ರಾತ್ರಿ ನಡೆಯಿತು.
ದೇಶದಲ್ಲಿ ಪೋಲಿಯೋ ನಿರ್ಮೂಲನೆ ಮಾದರಿಯಲ್ಲಿ ಕೋವಿಡ್ ಎದುರಿಸಲು ರೋಟರಿ ಕ್ಲಬ್ ಸದಸ್ಯರು ಸರ್ಕಾರ ಮತ್ತು ಜನ ಸಾಮಾನ್ಯರೊಂದಿಗೆ ಕೈ ಜೋಡಿಸಬೇಕು. ಇದಕ್ಕಾಗಿ ಸರಕಾರಿ ಆಸ್ಪತ್ರೆ ಮತ್ತಿತರ ಕಡೆಗಳಲ್ಲಿ ಬಡ ರೋಗಿಗಳು ಮತ್ತು ಆರೈಕೆದಾರರಿಗೆ ಸ್ಪಂದಿಸಬೇಕು ಎಂದು ಪೂರ್ವ ಜಿಲ್ಲಾ ಗವರ್ನರ್ ಡಾ. ನಾಗಾರ್ಜುನ್ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ರೋಟರಿ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ನೂತನ ಅಧ್ಯಕ್ಷ ಮಹಮ್ಮದ್ ವಳವೂರು ಹಾಗೂ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ನಿರ್ಗಮನ ಅಧ್ಯಕ್ಷ ನಾರಾಯಣ ಹೆಗ್ಡೆ ಮಾತನಾಡಿ, ಕಳೆದ ಅವಧಿಯಲ್ಲಿ ಕೋವಿಡ್ ಸಂಕಷ್ಟ ಮೀರಿ ಕ್ಲಬ್ ಗೆ
ಜಿಲ್ಲಾ ಮಟ್ಟದ ಪ್ರಶಸ್ತಿ ದೊರೆತಿದೆ ಎಂದರು. ಇದೇ ವೇಳೆ ದಾನಿ ಮಂಜುನಾಥ ಆಚಾರ್ಯ ಮತ್ತು ಮೇಘಾ ಆಚಾರ್ಯ ಮತ್ತಿತರರನ್ನು ಅಭಿನಂದಿಸಲಾಯಿತು.
ನೂತನ ಅಧ್ಯಕ್ಷ ಮಹಮ್ಮದ್ ವಳವೂರು, ಕಾರ್ಯದರ್ಶಿ ಧನಂಜಯ ಬಾಳಿಗ, ಕೋಶಾಧಿಕಾರಿಯಾಗಿ ಬೇಬಿ ಕುಂದರ್ ಹಾಗೂ ಮತ್ತಿತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಕೊರೋನಾ ದಿಂದ ಪೋಷಕರನ್ನು ಕಳೆದುಕೊಂಡ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣೆ, ನೀರು ಶುದ್ದೀಕರಣ ಯಂತ್ರ ಹಸ್ತಾಂತರಿಸಲಾಯಿತು. ನೂತನ ಸದಸ್ಯರಾಗಿ ಅಜಿತ್ ಶೆಟ್ಟಿ ಸೇರ್ಪಡೆಗೊಂಡರು. ಸಹಾಯಕ ಗವರ್ನರ್ ಸುರೇಂದ್ರ ಕಿಣಿ, ಪ್ರಮುಖರಾದ ಎನ್.ಪ್ರಕಾಶ ಕಾರಂತ, ವಾಣಿ ಕಾರಂತ್, ಮುಸ್ತಾಫ ಗೋಳ್ತಮಜಲು, ವಸಂತ ಪ್ರಭು ಮತ್ತಿತರರು ಉಪಸ್ಥಿತಿತರಿದ್ದರು.















