Coastal Bulletin

ಬಂಟ್ವಾಳ :ಕೋವಿಡ್ ಲಾಕ್ ಡೌನ್ ವೇಳೆ ವಿಮಾನಯಾನ ರದ್ದುಗೊಂಡು ಭಾರತದಲ್ಲಿ ಉಳಿದುಕೊಂಡಿದ್ದ ಮೊದಲ ಹಂತದ 73 ಮಂದಿ ಭಾರತೀಯ ಆರೋಗ್ಯ ಕಾರ್ಯಕರ್ತರನ್ನು ದುಬೈ ಆರೋಗ್ಯ ಪ್ರಾಧಿಕಾರ (ಡಿ.ಎಚ್.ಎ.)ಯಿಂದ ವಿಶೇಷ ಅನುಮತಿ ಪಡೆದು ಮರಳಿ ಕರೆಸಿಕೊಳ್ಳಲಾಗಿದೆ ಎಂದು ಪ್ರತಿಷ್ಠಿತ ಆಸ್ಟರ್ ಡಿಎಂ ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಶೀರ್ ಬಂಟ್ವಾಳ ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಏ.25ರಂದು ಭಾರತ - ಯು.ಎ.ಇ. ನಡುವಿನ ವಿಮಾನಯಾನ ರದ್ದುಗೊಂಡಿತ್ತು. ಇದರಿಂದಾಗಿ ಆಸ್ಟರ್ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳ ಒಟ್ಟು 250 ಮಂದಿ ವೈದ್ಯಕೀಯ ಸಿಬ್ಬಂದಿ ಯು.ಎ.ಇ.ಗೆ ತೆರಳಲು ಸಾಧ್ಯವಾಗದೆ ಭಾರತದಲ್ಲಿ ಉಳಿದುಕೊಂಡಿದ್ದರು. 

ಇದೀಗ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ವೈದ್ಯರು, ದಾದಿಯರು ಮತ್ತು ಅರೆವೈದ್ಯರು ಸೇರಿದಂತೆ ಒಟ್ಟು

73 ಮಂದಿಯ ಮೊದಲ ತಂಡ

ಬುಧವಾರ ಮುಂಜಾನೆ ದುಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡು ವಿಶೇಷ ಎಮಿರೇಟ್ಸ್ ವಿಮಾನಗಳ ಮೂಲಕ ಬಂದಿಳಿದರು ಎಂದು ಬಶೀರ್ ಬಂಟ್ವಾಳ ಹೇಳಿದ್ದಾರೆ.

ಭಾರತದಲ್ಲಿ ಇನ್ನೂ 250ಮಂದಿ ಸಿಬ್ಬಂದಿ ಉಳಿದುಕೊಂಡಿದ್ದು, ಇವರನ್ನು ಕೂಡಾ ಶೀಘ್ರವೇ ಕರೆ ತರಲು ಎಲ್ಲಾ ಪ್ರಯತ್ನ ನಡೆಸುವುದಾಗಿ ಅವರು ತಿಳಿಸಿದ್ದಾರೆ. 

---

Leave a Comment