ಅಮ್ಮುಂಜೆ: ವೀರ ಯೋಧ ಯಾದವ ಫ್ರೆಂಡ್ಸ್ (ರಿ ) ಇದರ 23ನೇ ವರ್ಷದ ಸ್ಥಾಪನ ದಿನಾಚರಣೆ.

Coastal Bulletin
ಅಮ್ಮುಂಜೆ: ವೀರ ಯೋಧ ಯಾದವ ಫ್ರೆಂಡ್ಸ್ (ರಿ ) ಇದರ 23ನೇ ವರ್ಷದ ಸ್ಥಾಪನ ದಿನಾಚರಣೆ.

ಬಂಟ್ವಾಳ :ಅಮ್ಮುಂಜೆ ವೀರ ಯೋಧ ಯಾದವ ಫ್ರೆಂಡ್ಸ್ (ರಿ ) ಸಂಘದ 23ನೇ ವರ್ಷದ ಸ್ಥಾಪನ ದಿನ ಹಾಗೂ ಸಂಘದ ಸದಸ್ಯರಾದ ದಿ. ನವೀನ್ ಚೌಟ ಹಾಗೂ ದಿ. ಮಹಾಬಲ ಪೂಜಾರಿ ಯವರಿಗೆ ಶ್ರದ್ದಾಂಜಲಿ ಸಭೆಯು ಮಾ. 9ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರ ಯೋಧ ಯಾದವ ಫ್ರೆಂಡ್ಸ್ ನ ಅಧ್ಯಕ್ಷ ಉದಯ. ಕೆ ವಹಿಸಿದ್ದರು, ಸಂಪನ್ಮೂಲಗಳ ವ್ಯಕ್ತಿಯಾಗಿ ಆಗಮಿಸಿದ ಸಾಮಾಜಿಕ ಕಾರ್ಯಕರ್ತ ಕಿಶೋರ್ ಪಲ್ಲಿಪಾಡಿ ಸಂಘ ಸಂಸ್ಥೆಗಳ ಮಹತ್ವ ಹಾಗೂ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು.

ಯಕ್ಷಗಾನ ಸಂಘಟಕ ಬಿ. ಜನಾರ್ಧನ ಅಮ್ಮುಂಜೆ ಅಗಲಿದ ಗಣ್ಯರಿಗೆ

ನುಡಿನಮನ ಸಲ್ಲಿಸಿದರು. ಸಂಘದ ಸೇವಾ ಯೋಜನೆಗಳ ಬಗ್ಗೆ ಸತ್ಯ ಪ್ರಸಾದ್ ಶೆಟ್ಟಿ ಮಾಹಿತಿ ನೀಡಿದರು, ಪೊಳಲಿ ಸಹಕಾರಿ ಸಂಘದ ನಿರ್ದೇಶಕ ಎ ಅಬೂಬಕ್ಕರ್ ಸಂಘ ನಡೆದು ಬಂದ ದಾರಿ ಬಗ್ಗೆ ನೆನಪಿಸಿದರು.ಉದ್ಯಮಿ ಉಮೇಶ್ ಬಾರಿಂಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೌರೀಶ್ ಧನ್ಯವಾದವಿತ್ತು, ಡಿಎ ಹರೀಶ್ ರಾವ್ ನಿರೂಪಿಸಿದರು.

Leave a Comment