ಬಿ ಸಿ ರೋಡ್ :ಮಾ.12ರಂದು ಸೂಕ್ತ ನ್ಯೂಸ್ ಕೇಬಲ್ ವಾಹಿನಿಯ ಉದ್ಘಾಟನಾ ಸಮಾರಂಭ.

Coastal Bulletin
ಬಿ ಸಿ ರೋಡ್ :ಮಾ.12ರಂದು ಸೂಕ್ತ ನ್ಯೂಸ್ ಕೇಬಲ್ ವಾಹಿನಿಯ ಉದ್ಘಾಟನಾ ಸಮಾರಂಭ.

ಬಂಟ್ವಾಳ :ಸೂಕ್ತ ಮೀಡಿಯಾ ನೆಟ್ವರ್ಕ್ ಸಂಸ್ಥೆಯ ಸೂಕ್ತ ನ್ಯೂಸ್ ಕೇಬಲ್ ವಾಹಿನಿ ಇದರ ಉದ್ಘಾಟನಾ ಸಮಾರಂಭವು ಮಾ.12ರಂದು ಬೆಳಿಗ್ಗೆ 10ಗಂಟೆಗೆ ಡಾ. ಜಗದೀಶ್ ರೈ ಆರ್ಕೇಡ್, 2ನೇ ಮಹಡಿ ಕೈಕಂಬ, ಬಿ.ಸಿ.ರೋಡ್ ನಲ್ಲಿ ನಡೆಯಲಿದೆ.

ಸೂಕ್ತ ನ್ಯೂಸ್ ಕಛೇರಿ ಉದ್ಘಾಟನೆಯನ್ನು ಶ್ರೀ ಶ್ರೀ ಮಹಾಭಲೇಶ್ವರ ಸ್ವಾಮೀಜಿ ಶ್ರೀ ಚಾಮುಂಡೇಶ್ವರೀ ಕ್ಷೇತ್ರ, ಕಣಿಯೂರು ಹಾಗೂ ರೆ ಪಾ ವಲೇರಿಯನ್ ಎಸ್. ಡಿ'ಸೋಜ ಮುಖ್ಯ ಧರ್ಮಗುರು, ಇನ್ಸಂಟ್ ಜೀಸಸ್ ಚರ್ಚ್ ಮೊಡಂಕಾಪು ಇವರು ನೆರವೇರಿಸಲಿದ್ದಾರೆ.

ನ್ಯೂಸ್ ರೂಂ ಉದ್ಘಾಟನೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಡ್ ಉಳಿಪಾಡಿಗುತ್ತು ಮಾಡಲಿದ್ದಾರೆ, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೃಷ್ಣ ಪ್ರಸಾದ್ ಆಚಾರ್ಯ ಅಸ್ರಣ್ಣರು, ಶ್ರೀ ಕ್ಷೇತ್ರ

ಪೂಂಜ ಇವರು ಮಾಡಲಿದ್ದು, ಶ್ರೀ ಯು.ಟಿ. ಖಾದರ್ ಮಾನ್ಯ ಸಭಾಧ್ಯಕ್ಷರು, ಕರ್ನಾಟಕ ಸರ್ಕಾರ ಇವರು ಅಧ್ಯಕ್ಷತೆ ವಹಿಸಲಿದ್ದಾರೆ,ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಮಾಜಿ ಸಚಿವ ಬಿ ರಮಾನಾಥ ರೈ ಸಹಿತ ಅನೇಕ ಗಣ್ಯರು ಈ ಸಂದರ್ಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮದ್ಯಾಹ್ನ ಗಂಟೆ 2.00 ರಿಂದ ಶ್ರೀ ರಾಗ್ ಮ್ಯೂಸಿಕ್ಸ್ ಪುತ್ತೂರು ಇವರಿಂದ ಸಂಗೀತ ಕಲರವ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ನಿರ್ದೇಶಕ ಪ್ರದೀಪ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment