ಬೆಂಜನಪದವು :ಶ್ರೀ ಜೈ ಹನುಮಾನ್ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ. 48 ದಿನಗಳ ಶ್ರೀ ರಾಮನಾಮ ತಾರಕ ಮಂತ್ರ ಜಪ ಸಂಕಲ್ಪದ ದೀಕ್ಷಗೆ ಚಾಲನೆ.

Coastal Bulletin
ಬೆಂಜನಪದವು :ಶ್ರೀ ಜೈ ಹನುಮಾನ್ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ. 48 ದಿನಗಳ ಶ್ರೀ ರಾಮನಾಮ ತಾರಕ ಮಂತ್ರ ಜಪ ಸಂಕಲ್ಪದ ದೀಕ್ಷಗೆ ಚಾಲನೆ.

ಬಂಟ್ವಾಳ : ಶ್ರೀ ರಾಮ ಭಕ್ತ ಆಂಜನೇಯ ಸೇವಾ ಟ್ರಸ್ಟ್ (ರಿ)ಇದರ ಅಶ್ರಯದಲ್ಲಿ ತಾಲೂಕಿನ ಕೊಡ್ಮಾಣ್ ಗ್ರಾಮದ ಬೆಂಜನಪದವು ಪೊಡಿಕಲ ಕಂಬ್ಳದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಜೈ ಹನುಮಾನ್ ಮಂದಿರದ ಲೋಕಾರ್ಪಣಾ ಕಾರ್ಯಕ್ರಮವು ಮೇ1ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಶ್ರೀ ಆಂಜನೇಯ ಸ್ವಾಮಿ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶದ ಆಮಂತ್ರಣ ಪತ್ರಿಕೆಯ ಬಿಡುಗಡೆ ಹಾಗೂ 48 ದಿನಗಳ ಶ್ರೀ ರಾಮನಾಮ ತಾರಕ ಮಂತ್ರ ಜಪ ಸಂಕಲ್ಪದ ದೀಕ್ಷಾ ಕಾರ್ಯಕ್ರಮವು ಮಾ.9ರಂದು ಆದಿತ್ಯವಾರ ಮಂದಿರದಲ್ಲಿ ನಡೆಯಿತು.

ವೇದಮೂರ್ತಿ ಸುಜೀರು ಗಣೇಶ್ ಭಟ್ ಇವರ ನೇತೃತ್ವದಲ್ಲಿ ಶ್ರೀ ರಾಮ ನಾಮ ತಾರಕ ಮಂತ್ರದ ಜಪ ಸಂಕಲ್ಪ ದೀಕ್ಷೆಯನ್ನು ಅರ್ಕುಲ ಶ್ರೀರಾಮ ಶಾಲೆಯ ನಿವೃತ್ತ ಮುಕ್ಯೋಪಾಧ್ಯಾಯರಾದ ಕೆ. ಆರ್ ದೇವದಾಸ್ ಹಾಗೂ ಉದ್ಯಮಿ ಉಮೇಶ್ ಶೆಟ್ಟಿ ಬರ್ಕೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. 

ಈ ಸಂದರ್ಭದಲ್ಲಿ ಪ್ರಮುಖರಾದ ಗೋಪಾಲಕೃಷ್ಣ(ಜಿ ಕೆ) ಶೆಟ್ಟಿ

ಕೊಡ್ಮಾಣ್, ರಾಧಾಕೃಷ್ಣ ತಂತ್ರಿ ಬೆಂಜನಪದವು , ಪದ್ಮನಾಭ ಶೆಟ್ಟಿ ಕೊಟ್ಟಿoಜ, ಸತೀಶ್ ನಾಯ್ಗ ಕೊಡ್ಮಾಣ್ ಕೊಡಿ, ದಾಮೋದರ ನೆತ್ತರಕೆರೆ, ಉಮೇಶ್ ಸಾಲ್ಯಾನ್ ಬೆಂಜನಪದವು, ಬಿ.ಜನಾರ್ಧನ ಅಮ್ಮುoಜೆ, ಭರತ್ ಕುಮುಡೇಲ್, ಕಾರ್ತಿಕ್ ಬಳ್ಳಾಲ್ ಅಮ್ಮುoಜೆ , ಸತೀಶ್ ಶೆಟ್ಟಿ ಪೊಡಿಕಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂದಿರದ ಸದಸ್ಯರು, ಸೀತಾ ಮಾತೃ ಮಂಡಳಿಯ ಸದಸ್ಯರು ಮತ್ತಿತರರು ಇದ್ದರು.

Leave a Comment