Coastal Bulletin

ಬಂಟ್ವಾಳ :ತಾಲೂಕಿನ ಬೆಂಜನಪದವಿನ ಕಲ್ಪನೆಯಲ್ಲಿ ನೂತನ ಶ್ರೀ ಪೊಳಲಿ ರಿಕ್ಷಾ ಭವನವನ್ನು ಶಾಸಕ ರಾಜೇಶ್ ನಾಯ್ಕ್ ಫೆ 10ರಂದು ಶುಕ್ರವಾರ ಸಂಜೆ ಉದ್ಘಾಟಿಸಿದರು.

.ಈ ಸಂದರ್ಭದಲ್ಲಿ ಮಾತನಾಡಿದ ಆವರು ಹಲವು ಕಾಲದ ಬೇಡಿಕೆಯಾದ ರಿಕ್ಷಾ ನಿಲ್ದಾಣವನ್ನು ಆದ್ಯತೆಯ ನೆಲೆಯಲ್ಲಿ ಒದಗಿಸುವ ಕೆಲಸ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಇದರ ನಿರ್ವಹಣೆ ಮತ್ತು ಸ್ವಚ್ಚತೆಯನ್ನು ಕಾಯ್ದುಕೊಂಡು ಜನರ ಸೇವೆ ಮಾಡಿ ಎಂದು ಅವರು ತಿಳಿಸಿದರು.

ಕಾರ್ಮಿಕರಿಗೆ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ರಿಕ್ಷಾ ಮಂಡಳಿ ನಿರ್ಮಾಣ ಮಾಡುವ ಮೂಲಕ ಚಾಲಕರ ಸಮಸ್ಯೆ ಪರಿಹಾರಕ್ಕಾಗಿ ಪ್ರಯತ್ನ ಮಾಡಲಾಗುತ್ತಿದೆ.ಕೃಷಿ ಕಾರ್ಮಿಕರ ಜೊತೆಯಲ್ಲಿ ಎಲ್ಲಾ ವರ್ಗದ ದುಡಿಯುವ ಜನರಿಗೆ ಆರ್ಥಿಕ ನೆರವು ನೀಡುವ ಅನೇಕ ಯೋಜನೆಗಳಿಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಅವರ ಸಮ್ಮುಖದಲ್ಲಿ ಅಮ್ಟಾಡಿಯ ಡಾ| ಕೃಷ್ಣ ಮೂರ್ತಿ ಹಾಗೂ ರಿಕ್ಷಾ ಚಾಲಕ ಗುರುವಪ್ಪ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಭಾರತೀಯ ಮಜ್ದೂರು ಸಂಘದ ನಿಕಟಪೂರ್ವರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ, ಬೆಂಜನಪದವು

ಶ್ರೀ ಭದ್ರಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ ಬಿ‌.ಬೆಂಜನಪದವು ಕೊರಗತನಿಯಜ್ಜ ಕಟ್ಟೆಯ ಧರ್ಮದರ್ಶಿ ವಿಜಯ, ಭಾರತೀಯ ಮಜ್ದೂರು ಸಂಘದ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ‌ಮಣಿಹಳ್ಳ, ಉಪಾಧ್ಯಕ್ಷ ನಾರಾಯಣ ಪೂಜಾರಿ, ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್, ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷೆ ಯಶೋಧ ಜಾರಂದಗುಡ್ಡೆ, ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷ ವಾಮನ ಆಚಾರ್ಯ, ಉಪಾಧ್ಯಕ್ಷೆ ಪ್ರಮೀಳಾ, ಬಡಗಬೆಳ್ಳೂರು ಗ್ರಾಮಪಂಚಾಯತ್ ಅಧ್ಯಕ್ಷ ಪ್ರಕಾಶ್ ಆಳ್ವ, ಅಮ್ಮುಂಜೆ ಗ್ರಾಮಪಂಚಾಯತ್ ಸದಸ್ಯರಾದ ರಾಧಕೃಷ್ಣ ತಂತ್ರಿ, ಕಾರ್ತಿಕ್ ಬಳ್ಳಾಲ್, ಲಕ್ಮೀ, ಬಾಗೀರಥಿ, ರವೀಂದ್ರ ಸುವರ್ಣ, ರೋನಾಲ್ಡ್ ಡಿ.ಸೋಜ, ಕಲ್ಪನೆ ರಿಕ್ಷಾ ಚಾಲಕರ ಸಂಘದ ಗೌರವಾಧ್ಯಕ್ಷ ಕಮಲಾಕ್ಷ ಪೂಜಾರಿ, ಕಲ್ಪನೆ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಉದಯಕುಮಾರ್,ಪ್ರೇಮ್ ಜೀತ್, 

ಪ್ರಮುಖರಾದ ಸಂದೀಪ್ ಬೆಂಜನಪದವು, ಜನಾರ್ದನ ಬಾರಿಂಜೆ,ಸುರೇಶ್ ಬೆಂಜನಪದವು, ರಾಮಚಂದ್ರ ಆಚಾರ್ಯ ಬೆಂಜನಪದವು ಮತ್ತಿತರರು ಉಪಸ್ಥಿತರಿದ್ದರು.ಭರತ್ ಶಿವಾಜಿನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Comment