ಬಂಟ್ವಾಳ :ಕಾಂಗ್ರೆಸ್ ಪಕ್ಷದ ವತಿಯಿಂದ ಬಂಟ್ವಾಳ ಕ್ಷೇತ್ರದಾದ್ಯಂತ ಗ್ರಾಮಗಳನ್ನು ತಲುಪುವ ಮಾಜಿ ಸಚಿವ ರಮಾನಾಥ ರೈ ನೇತೃತ್ವದ 14ದಿನಗಳ ಬಂಟ್ವಾಳ ಪ್ರಜಾಧ್ವನಿಯಾತ್ರೆಗೆ ಮಾರ್ಚ್ 10ರಂದು ಪೊಳಲಿ ಸಮೀಪದ ಪುಂಚಮೆಯಲ್ಲಿ ಚಾಲನೆ ದೊರೆಯಿತು. ಇದಕ್ಕೂ ಮೊದಲು ಬಂಟ್ವಾಳ ವೆಂಕಟರಮಣ ದೇವಸ್ಥಾನ, ಅಗ್ರಹಾರ ಚರ್ಚ್, ಬಂಟ್ವಾಳ ಕೆಳಗಿನಪೇಟೆ ಜುಮಾ ಮಸೀದಿ ಹಾಗೂ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪುಂಚನೆ ಜಂಕನ್ನಿನಿಂದ ಯಾತ್ರೆ ಪ್ರಾರಂಭವಾಯಿತು.
ಈ ಸಂದರ್ಭದಲ್ಲಿ ಪಾರಿವಾಳವನ್ನು ಹಾರಿಸಿ ಪ್ರಜಾಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಹೇಳಿದ್ದನ್ನು ಮಾಡಿ ತೋರಿಸಿದ ಸರ್ಕಾರ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಈಗಿನ ಬಿಜೆಪಿ ಸರ್ಕಾರವು ಕಮಿಷನ್ ಗಾಗಿ ಕಾಮಗಾರಿ ಮಾಡುತ್ತಿದೆ,ರಾಜ್ಯದಲ್ಲೇ ಮಾದರಿಯಾಗುವ ರೀತಿಯಲ್ಲಿ ಸಾವಿರಗಟ್ಟಲೆ ಕೋಟಿ ರೂಪಾಯಿ ಅನುದಾನದ ಹೊಳೆಯನ್ನೇ ಹರಿಸಿ ಸಾಮಾನ್ಯ ಜನರಿಗೂ ಅನುಕೂಲವಾಗುವ ರೀತಿಯ ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಿದವರು ಮಾಜಿ ಸಚಿವ ಬಿ.ರಮಾನಾಥ ರೈಗಳು ಎಂದು ಹೇಳಿದರು.
ಸಚಿವ ಬಿ.ರಮಾನಾಥ ರೈ ಮಾತನಾಡಿ,ಜನರ ಧ್ವನಿಯಾಗಿ ಈ ಯಾತ್ರೆಯು ಮುಂದುವರಿಯಲಿದ್ದು, ಇಡೀ ರಾಜ್ಯದಲ್ಲಿ 94 ಸಿ.ಹಕ್ಕು ಪತ್ರ ಹಾಗೂ 20ಸಾವಿರ ವಸತಿ ಯೋಜನೆಗಳನ್ನು ಬಂಟ್ವಾಳದಲ್ಲಿ ಮಂಜೂರು ಮಾಡಿದ ಕೀರ್ತಿ ತನ್ನ ಅವಧಿಯಲ್ಲಿ ನಡೆದಿದೆ ಎಂದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಹಿನಾಯತ್ ಆಲಿ, ಪ್ರಚಾರ ಸಮಿತಿ ಪ್ರಮುಖರಾದ ಪೃಥ್ವಿ ರಾಜ್, ಯಾತ್ರೆಯ ಸಂಚಾಲಕ ಪಿಯೂಸ್
ಎಲ್. ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಪದ್ಮಶೇಖರ್ ಜೈನ್, ಎಡ್ತೂರು ರಾಜೀವ ಶೆಟ್ಟಿ, ಜಗದೀಶ್ ಕೊಯಿಲ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಲವೀನಾ ವಿಲ್ಮಾ ಮೋರಸ್, ಮಲ್ಲಿಕಾ ಶೆಟ್ಟಿ, ಜಯಂತಿ ವಿ.ಪೂಜಾರಿ, ವೆಂಕಪ್ಪ ಪೂಜಾರಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ , ಪದ್ಮನಾಭ ರೈ, ಪಿ.ಎ. ರಹೀಂ, ಸಂಪತ್ ಕುಮಾರ್ ಶೆಟ್ಟಿ, ಸದಾಶಿವ ಬಂಗೇರ, ಸುರೇಶ್ ಜೋರಾ, ಇಬ್ರಾಹಿಂ ನವಾಝ್, ಮಧುಸೂದನ್ ಶೆಣೈ, ಮನೋಹರ್ ನೇರಂಬೋಳು, ಲೋಲಾಕ್ಷ ಶೆಟ್ಟಿ, ಚಂದ್ರಹಾಸ ಭಂಡಾರಿ, ಮಹಮ್ಮದ್ ಶರೀಫ್, ಸಿದ್ದಿಕ್ ಗುಡ್ಡೆಯಂಗಡಿ, ಪ್ಲೋಸಿ ಡಿಸೋಜಾ, ಚಂದ್ರಶೇಖರ ಪೂಜಾರಿ, ಅಬ್ಬಾಸ್ ಅಲಿ, ಲುಕ್ಮಾನ್, ಶಬೀರ್ ಸಿದ್ದಕಟ್ಟೆ, ಡೆಂಜಿಲ್ ಮೊದಲಾದವರು ಉಪಸ್ಥಿತರಿದ್ದರು. ಕರಿಯಂಗಳ ಗ್ರಾ.ಪಂ.ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿದರು. ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.














