ಬಂಟ್ವಾಳ :ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ರಾಜರ್ಷಿ ಡಾ. ಡಿ ವೀರೇಂದ್ರ ಹೆಗ್ಡೆಯವರು ಬಿಸಿ ರೋಡಿನ ಚಂಡಿಕಾ ನಗರದಲ್ಲಿರುವ ಚಂಡಿಕಾ ಪರಮೇಶ್ವರಿ ದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ 5 ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡಿದ್ದು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಲಯನ್ ಲೋಕನಾಥ ಶೆಟ್ಟಿಯವರು ಪರಮ ಪೂಜ್ಯರಿಂದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿಗಳಾದ ಬಿ ರಾಮಚಂದ್ರ ರಾವ್ ,ಕೋಶಾಧಿಕಾರಿಗಳಾದ ಶ್ರೀ
ಎಚ್. ಸಂಕಪ್ಪ ಶೆಟ್ಟಿ ,ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀ ಪ್ರಶಾಂತ್ ಭಟ್ ಉಪಸ್ಥಿತರಿದ್ದರು..














