ಮಂಗಳೂರು ::ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಒಕ್ಕೂಟ ಇದರ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಗರದ ಪುರಭವನದಲ್ಲಿ ಬಹಳ ವಿಜೃಂಭಣೆಯಿಂದ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಬಂಟ್ಸ್ ಹಾಸ್ಟೆಲ್ ನಿಂದ ಟೌನ್ ಹಾಲ್ ತನಕ ನಡೆದ ಮೆರವಣಿಗೆಯಲ್ಲಿ ಮಹಿಳಾ ಆಟೋ, ಬಸ್, ಆಂಬುಲೆನ್ಸ್ ,ಬುಲ್ಲೆಟ್,ಟ್ರಕ್ ಚಾಲನೆಯನ್ನು ಮಹಿಳೆಯರೇ ಮಾಡುವ ಮೂಲಕ ಮಹಿಳಾ ದಿನಾಚರಣೆಗೆ ವಿಶೇಷ ಮೆರಗನ್ನು ನೀಡಿದರು.
ವಿಶೇಷ ಆಕರ್ಷಣೆ ಎಂಬಂತೆ ಕಿತ್ತೂರು ರಾಣಿ ಚೆನ್ನಮ್ಮ ವೇಷ ಧರಿಸಿ ಕುದುರೆ ಸವಾರಿಯನ್ನು ಬಿ ಸಿ ರೋಡ್ ನ ಖ್ಯಾತ ನ್ಯಾಯವಾದಿ, ಕರ್ನಾಟಕ ಸರಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶೈಲಜಾ
ರಾಜೇಶ್ ರವರು ಭವ್ಯ ಮೆರವಣಿಗೆ ಯಲ್ಲಿ ರಾಣಿಯಂತೆ ಕಂಗೊಳಿಸುವ ಮೂಲಕ ಜನರ ಗಮನ ಸೆಳೆದು ಮೆಚ್ಚುಗೆ ಗೆ ಪಾತ್ರರಾದರು.
ವಿಶೇಷ ಎಂದರೆ ಶೈಲಜಾ ರಾಜೇಶ್ 2022ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರಿಂದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಸ್ವೀಕಾರ ಮಾಡಿ, 2023 ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಯಂದು ಕಿತ್ತೂರು ರಾಣಿ ಚೆನ್ನಮ್ಮ ನಾಗಿ ಭವ್ಯ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿರುವುದು ವಿಶೇಷವಾಗಿದೆ.














